ನಗರ ಪಂಚಾಯತ್ ಕಸದೊಂದಿಗೆ ಆಸ್ಪತ್ರೆಯ ತ್ಯಾಜ್ಯ; ಸಿರಿಂಜ್ ಚುಚ್ಚಿ ಪೌರ ಕಾರ್ಮಿಕನಿಗೆ ಗಾಯ

0

ಸರಕಾರಿ ಆಸ್ಪತ್ರೆಯಲ್ಲಿ ಟಿಟಿ ಇಂಜೆಕ್ಷನ್ ನೀಡಲು ಸತಾಯಿಸಿದ ಸಿಬ್ಬಂದಿ- ಆರೋಪ: ತಹಶೀಲ್ದಾರರಿಗೆ ದೂರು

ಸುಳ್ಯ ನಗರ ಪಂಚಾಯತ್ ನಲ್ಲಿ ಕಸ ವಿಲೇವಾರಿ ಮಾಡುವ ಸಂದರ್ಭದಲ್ಲಿ ಪೌರ ಕಾರ್ಮಿಕರೋರ್ವರಿಗೆ ಇಂಜೆಕ್ಷನ್ ಸಿರಿಂಜ್ ಕೈಗೆ ತಾಗಿದ್ದು, ಟಿಟಿ ಇಂಜೆಕ್ಷನ್‌ ಪಡೆಯಲು ಸುಳ್ಯ ಸರಕಾರಿ ಆಸ್ಪತ್ರೆ ಗೆ ಹೋದಾಗ ಅಲ್ಲಿ ಮತ್ತೆ ಬನ್ನಿ ಎಂದು ಸತಾಯಿಸಿದರೆಂದು ತಹಶೀಲ್ದಾರರಿಗೆ ದೂರು ನೀಡಿದ ಘಟನೆ ಇಂದು ನಡೆದಿದೆ.
ಬೆಳಿಗ್ಗೆ ನಗರ ಪಂಚಾಯತ್ ನಲ್ಲಿ ಕಸ ವಿಲೇವಾರಿ ಮಾಡುವ ವೇಳೆ ಸಿರಿಂಜ್ ಕೈಗೆ ತಾಗಿದೆ. ಆಸ್ಪತ್ರೆಯ ತ್ಯಾಜ್ಯ ಕಸದೊಂದಿಗೆ ಹಾಕಬಾರದೆಂಬ ನಿಯಮವಿದ್ದರೂ ಹಾಕಿದ್ದಾರೆ.ತಕ್ಷಣ ಟಿಟಿ ಇಂಜೆಕ್ಷನ್ ಪಡೆಯಲು ಸರಕಾರಿ ಆಸ್ಪತ್ರೆಗೆ ಹೋದಾಗ 9 ಗಂಟೆಗೆ ಬನ್ನಿ ಎಂದು ಹೇಳಿದರು, ಮತ್ತೆ ಪುನ: 10 ಗಂಟೆಗೆ ಬನ್ನಿ ಎಂದು ಸತಾಯಿಸುತ್ತಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ನಮ್ಮನ್ನು ಸತಾಯಿಸಿದ್ದು ನಮಗೆ ಬೇಸರ ತರಿಸಿದೆ. ನಾನು ಈ ಬಗ್ಗೆ ತಹಶಿಲ್ದಾರರಿಗೆ ದೂರು ನೀಡಿದ್ದೇನೆ ಎಂದು ನ.ಪಂ.ಪೌರಕಾರ್ಮಿಕ ವಸಂತರವರು ಸುದ್ದಿಗೆ ತಿಳಿಸಿದ್ದಾರೆ.