ಬ್ಯಾಂಕ್ ಆಫ್ ಬರೋಡಾದ ಸುಳ್ಯ ಶಾಖಾ ಹಿರಿಯ ವ್ಯವಸ್ಥಾಪಕ ಅಶೋಕ್ ವಿಮಾನ್ ಹಾಸನಕ್ಕೆ ವರ್ಗ

0

ಬ್ಯಾಂಕ್ ಆಫ್ ಬರೋಡಾದ ಸುಳ್ಯ ಶಾಖೆಯಲ್ಲಿ ಕಳೆದ 2 ವರ್ಷಗಳಿಂದ ಹಿರಿಯ ವ್ಯವಸ್ಥಾಪಕರಾಗಿ ಸೇವೆಯಲ್ಲಿದ್ದ ಅಶೋಕ್ ವಿಮಾನ್ ರವರು ಹಾಸನದ ಪ್ರಾದೇಶಿಕ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.

ಮೂಲತಃ ಮಂಡ್ಯದವರಾದ ಇವರು,
2022 ಜುಲೈ 8ರಂದು ಸುಳ್ಯ ಶಾಖೆಗೆ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಬಂದಿದ್ದರು.

ಅಶೋಕ್ ರವರು ತನ್ನ ಕರ್ತವ್ಯದಲ್ಲಿ ತ್ವರಿತವಾಗಿ ಸ್ಪಂದಿಸುವ ಮೂಲಕ ಜನಸ್ನೇಹಿ ವ್ಯವಸ್ಥಾಪಕರಾಗಿ ಅನೇಕರಿಂದ ಮೆಚ್ಚುಗೆ ಪಡೆದಿದ್ದರು.