ಭಕ್ತಿ,ಸಂಭ್ರಮದ ಪೆರುವಾಜೆ ಜಾತ್ರೋತ್ಸವ ಸಂಪನ್ನ : ದೈವಗಳ ನೇಮೋತ್ಸವ

0

ಇಂದು ರಾತ್ರಿ ಕಲ್ಕುಡ, ಕಲ್ಲುರ್ಟಿ ದೈವದ ನೇಮೋತ್ಸವ

ಪೆರುವಾಜೆ ಜಾತ್ರೋತ್ಸವವು ಜ.16 ರಿಂದ ಪ್ರಾರಂಭಗೊಂಡು ಜ.20 ರಂದು ಧ್ವಜಾವರೋಹಣ ಮೂಲಕ ಸಂಪನ್ನಗೊಂಡಿತು.
ಜ.21 ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಕಲಶಪೂಜೆ ನಡೆಯಿತು.
ಬೆಳಿಗ್ಗೆ ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ನೇಮೋತ್ಸವ,ಪ್ರಸಾದ ವಿತರಣೆ ನಡೆಯಿತು.


ಮಧ್ಯಾಹ್ನ ಗಂಟೆ 12 ರಿಂದ ಶ್ರೀ ದೇವರಿಗೆ ಸಂಪ್ರೋಕ್ಷಣೆ,ಕಲಶಾಭಿಷೇಕ,ಮಹಾಪೂಜೆ,ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ ನಡೆಯಿತು.
ನಂತರ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು,ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಇಂದು ಸಂಜೆ ಗಂಟೆ 7.00 ಕ್ಕೆ ಶ್ರೀ ಕಲ್ಲುರ್ಟಿ ,ಕಲ್ಕುಡ ದೈವದ ನೇಮ ನಡೆಯಲಿದೆ.