ಸುಬ್ರಹ್ಮಣ್ಯ ಭಟ್ ಕೆ. ಎನ್. ಕಲ್ಲುಗುಂಡಿಯವರಿಗೆ ಹವ್ಯಕ ವಿದ್ಯಾ ರತ್ನ ಪ್ರಶಸ್ತಿ ಲಭಿಸಿದೆ.
ಮೂಲತಃ ಸುಳ್ಯದ ಕಲ್ಲುಗುಂಡಿಯವರಾದ ಇವರು ಪ್ರಸ್ತುತ ಭಾರತೀಯ ತಾಂತ್ರಿಕ ಸಂಸ್ಥೆ ದೆಹಲಿ (IIT ದೆಹಲಿ) ಯಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ. 2019ರಲ್ಲಿ ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕದಿಂದ ಎಂ ಎಸ್ ಸಿ ಫಿಸಿಕ್ಸ್ ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು, ಚಿನ್ನದ ಪದಕವನ್ನು ಗಳಿಸಿದ್ದಾರೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) 5 ವರ್ಷಗಳ ಅವಧಿಗೆ ನೀಡುವ ಪ್ರತಿಷ್ಠಿತ ಇನೈರ್ ಫೆಲೋಶಿಪ್ ಪ್ರಶಸ್ತಿಯನ್ನು 2020 ರಲ್ಲಿ ಪಡೆದಿದ್ದಾರೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ, ಭಾರತದಲ್ಲೂ ವಿದೇಶದಲ್ಲೂ ತಮ್ಮ ಸಂಶೋಧನಾ ಕಾರ್ಯವನ್ನು ಪ್ರಸ್ತುತಪಡಿಸಿದ್ದಾರೆ. ಅವರ ಈ ಸಾಧನೆಗೆ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ವಿದ್ಯಾ ರತ್ನ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಸುಬ್ರಮಣ್ಯ ಭಟ್ ರವರು ನಾರಾಯಣ ಭಟ್ ಕೆ ಎಸ್ ಮತ್ತು ವಾಸಂತಿ ಭಟ್ ಇವರ ಪುತ್ರ.