ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ ಅಧ್ಯಕ್ಷರಾಗಿ ಎಚ್ ಎಲ್ ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಶೋಭಾ ಅವರು ಕಾರ್ಯ ನಿರ್ವಹಿಸಿದರು. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಮೈತ್ರಿ 7 ಪಡೆದು ಆಡಳಿತ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ 5 ಸ್ಥಾನ ಗೆದ್ದಿತ್ತು.
ಎಚ್ .ಎಲ್ ವೆಂಕಟೇಶ್ ಅವರನ್ನು ಜಯಪ್ರಕಾಶ್ ಕೂಜುಗೋಡು ಸೂಚಿಸಿದರು, ಭಾರತಿ ದಿನೇಶ್ ಅನುಮೋದಿಸಿದರು. ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ ಅವರನ್ನು ಕಿರಣ್ ಪೈಲಾಜೆ ಸೂಚಿಸಿದರು, ಗಿರೀಶ್ ಆಚಾರ್ಯ ಅನುಮೋದಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಮೋಹನ್ ದಾಸ್ ರೈ, ಉಪಾಧ್ಯಕ್ಷ ಸ್ಥಾನಕ್ಕೆ ಮಾದವ ದೇವರಗದ್ದೆ ನಾಮಪತ್ರ ಸಲ್ಲಿಸಿ ಹಿಂತೆಗೆತ ಮಾಡಿದರು.
ನಿರ್ದೇಶಕರುಗಳಾದ ಯಶೋದ ಕೃಷ್ಣ, ರವೀಂದ್ರ ಕುಮಾರ್ ರುದ್ರಪಾದ, ಸೋಮಶೇಖರ್ ಕಟ್ಟೆಮನೆ. ಈ ಸಂದರ್ಭ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮನೋಜ್, ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೆ.ಎಸ್, ಜಯಪ್ರಕಾಶ್ ಕುಲ್ಕುಂದ ಮತ್ತಿತರರು ಉಪಸ್ಥಿತರಿದ್ದರು.