ಬಿಜೆಪಿಗೆ ಬಂಡಾಯದ ಬಿಸಿ
ಮಂಡೆಕೋಲು ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜ.೨೭ರಂದು ಚುನಾವಣೆ ನಡೆಯಲಿದ್ದು ೧೨ ನಿರ್ದೇಶಕ ಸ್ಥಾನಕ್ಕೆ ೨೭ ಅಂತಿಮ ಕಣದಲ್ಲಿದ್ದಾರೆ.
ಒಟ್ಟು ೨೯ ನಾಮಪತ್ರಗಳು ಸಲ್ಲಿಕೆಯಾಗಿತ್ತು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ರವಿಚಂದ್ರ ಕೆ.ಆರ್., ಪ.ಪಂಗಡದ ನಾಮಪತ್ರ ಸಲ್ಲಿಸಿದ್ದ ಪುರುಷೋತ್ತಮ ಬೇಂಗತ್ತಮಲೆ ನಾಮಪತ್ರ ವಾಪಾಸು ಪಡೆದಿದ್ದಾರೆ.
ಬಿಜೆಪಿ ಬೆಂಬಲಿತರು : ೧೨ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ೧೩ ನಾಮಪತ್ರ ಸಲ್ಲಿಸಿಕೆಯಾಗಿದೆ. ಸಾಮಾನ್ಯ ೬ ಸ್ಥಾನಕ್ಕೆ ಕೇಶವಮೂರ್ತಿ ಹೆಬ್ಬಾರ್, ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮಂಡೆಕೋಲು, ಆಶಿಕ್ ದೇವರಗುಂಡ, ಪುರುಷೋತ್ತಮ ಕಾಡುಸೊರಂಜ, ಲಿಂಗಪ್ಪ ಬದಿಕಾನ, ಎ ಮೀಸಲು ಸ್ಥಾನಕ್ಕೆ ಸುರೇಶ್ ಕಣೆಮರಡ್ಕ, ಬಿ.ಮೀಸಲು ಸ್ಥಾನಕ್ಕೆ ರಾಜಣ್ಣ ಪೇರಾಲುಮೂಲೆ, ಪ.ಪಂಗಡ ಮೀಸಲು ಸ್ಥಾನಕ್ಕೆ ಶಶಿಧರ ಕಲ್ಲಡ್ಕ, ಪ.ಜಾತಿ ಮೀಸಲು ಸ್ಥಾನಕ್ಕೆ ಸದಾನಂದ ಮಾಡಿವಾಳಮೂಲೆ, ಮಹಿಳಾ ಮೀಸಲು ಸ್ಥಾನದಿಂದ ಕುಸುಮ ದೇವರಗುಂಡ , ಜಯಶ್ರೀ ಚೌಟಾಜೆಯವರು ಅಂತಿಮ ಕಣದಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತರು : ಕಾಂಗ್ರೆಸ್‌ನಿಂದ ಒಟ್ಟು ೧೦ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ೬ ಸ್ಥಾನಗಳಲ್ಲಿ ೫ ಮಂದಿ ನಾಮಪತ್ರ ಸಲ್ಲಿಸಿದ್ದು ಶ್ರೀಮತಿ ಲತಾ ಸದಾನಂದ ಮಾವಜಿ, ಚಂದ್ರಶೇಖರ ಪಂಜಿಮಲೆ, ಕೃಷ್ಣ ಎಂ, ಅಬ್ದುಲ್ಲ ಮಾರ್ಗ, ನೇಮಿಚಂದ್ರ ಮಡಿವಾಳಮೂಲೆ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಶುಭಕರ ಬೊಳುಗಲ್ಲು, ಹಿಂದುಳಿದ ವರ್ಗ ಎ ಸ್ಥಾನಕ್ಕೆ ರವಿ ಚೇರದಮೂಲೆ, ಪ.ಜಾತಿ ಮೀಸಲು ಸ್ಥಾನಕ್ಕೆ ರವಿ ಚೇರದಮೂಲೆ, ಪ.ಪಂಗಡ ಮೀಸಲು ಸ್ಥಾನಕ್ಕೆ ಸುಂದರ ನಾಯ್ಕ್ ಮಾವಂಜಿ ಅಂತಿಮ ಕಣದಲ್ಲಿದ್ದಾರೆ.
ಬಿಜೆಪಿಗೆ ಬಂಡಾಯದ ಬಿಸಿ
ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸಾಮಾನ್ಯ ಸ್ಥಾನಕ್ಕೆ ದಾಮೋದರ ಪಾತಿಕಲ್ಲು ಹಾಗೂ ಪದ್ಮನಾಭ ಚೌಟಾಜೆ, ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಕುಮಾರನ್ ಮಾವಂಜಿ ನಾಮಪತ್ರ ಸಲ್ಲಿಸಿದರೆ, ಸ್ವತಂತ್ರ ಅಭ್ಯರ್ಥಿಗಳಾಗಿ ಸಾಮಾನ್ಯ ಸ್ಥಾನಕ್ಕೆ ಶಶಿಧರ ಮಾವಜಿ, ಬಾಲಕೃಷ್ಣ ಬೊಳುಗಲ್ಲು ಅಂತಿಮ ಕಣದಲ್ಲಿದ್ದಾರೆ.
ಬಿಜೆಪಿಯಲ್ಲಿ ಬಂಡಾಯ
ಮಂಡೆಕೋಲು ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ದಾಮೋದರ ಪಾತಿಕಲ್ಲುರವರು ಈ ಬಾರಿ ಬಂಡಾಯವೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರ ಹೆಸರಿತ್ತೆಂದೂ, ಆದರೆ ಘೋಷಣೆ ಸಂದರ್ಭ ಇವರ ಹೆಸರನ್ನು ಕೈ ಬಿಟ್ಟು ಬೇರೊಬ್ಬರಿಗೆ ಪಕ್ಷ ಅವಕಾಶ ನೀಡಿದೆ. ಇದರಿಂದ ಅಸಮಾಧಾನಗೊಂಡ ಅವರು ಜ.೧೯ರಂದು ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. “ನಾನು ನಿರ್ದೇಶಕ ಸ್ಥಾನ ಕೊಡಿ ಎಂದು ಕೇಳಿರಲಿಲ್ಲ. ಪಕ್ಷದವರೇ ನನ್ನನ್ನು ಸಂಪರ್ಕಿಸಿ ಈ ಬಾರಿ ನೀವು ಸೊಸೈಟಿ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದರಲ್ಲದೆ, ನನ್ನ ಒಪ್ಪಿಗೆ ಪಡೆದು ನಿಮ್ಮ ಹೆಸರು ಸೇರಿಸಿzವೆ ಎಂದು ಕೂಡಾ ಹೇಳಿದ್ದರು. ಆದರೆ ಪಟ್ಟಿ ಘೋಷಣೆಯ ಸಂದರ್ಭ ನನ್ನ ಹೆಸರು ಕೈ ಬಿಡಲಾಗಿದೆ. ಅವರಾಗಿಯೇ ಕೇಳಿ, ಹೆಸರು ಸೇರಿಸುವುದಾಗಿ ಹೇಳಿ ಈಗ ಅವಕಾಶ ನೀಡದೇ ನನಗೆ ಅವಮಾನ ಮಾಡಿದ್ದಾರೆ. ಅದು ಸರಿಯಲ್ಲ. ಇದುವರೆಗೆ ನಾನು ಯಾವುದೇ ಸ್ಥಾನ ಆಕಾಂಕ್ಷೆ ಪಟ್ಟವನಲ್ಲ. ಆದ್ದರಿಂದ ಈ ಬಾರಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿzನೆ” ಎಂದು ದಾಮೋದರ ಪಾತಿಕಲ್ಲು ತಿಳಿಸಿದ್ದಾರೆ.
ಒಂದು ಬಾರಿ ನಾಮನಿರ್ದೇಶಕರಾಗಿ, ಕಳೆದ ಅವಧಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ, ಸಂಘ ಪರಿವಾರದಲ್ಲಿ ಮುಂಚೂಣಿಯಲ್ಲಿರುವ ಪದ್ಮನಾಭ ಚೌಟಾಜೆಯವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ, ನನಗೆ ಸೀಟು ಕೊಡಬೇಕೆಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಕೊಡಬಾರದೆಂದು ಹೇಳಿದ್ದು ನನಗೆ ಗೊತ್ತಾಗಿದೆ. ಸೊಸೈಟಿ ನಡೆಸಲು ಅನುಭವಸ್ಥರು ಬೇಕಾಗಿದ್ದು, ನಾನು ಸ್ಪರ್ಧಿಸುತ್ತಿzನೆ. ಜನರು ನನ್ನನ್ನು ಬೆಂಬಲಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.