ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಕೆಸರುಮಯ, ಹೆದ್ದಾರಿಯಲ್ಲಿ ಅಪಾಯಕಾರಿ ಮರದಿಂದ ಸ್ಥಳೀಯರ ಆತಂಕ
ಜಾಲ್ಸೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಪೈಚಾರು ಮತ್ತು ಆರ್ತಾಜೆ ಪರಿಸರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು ಸಂಭಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
ಪೈಚಾರು ಮಾಣಿ ಮೈಸೂರು ಹೆದ್ದಾರಿ ಬಳಿ ಬರೆಯ ಮೇಲೆ ಅಪಾಯಕಾರಿ ಮರವಿದ್ದು ಅದರ ಕೆಳ ಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗುತ್ತಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.
ಅಲ್ಲದೆ ಸೋಣಂಗೇರಿ ರಸ್ತೆ ಕಳೆದ ಒಂದು ವರ್ಷಗಳ ಹಿಂದೆ ಅಭಿವೃದ್ಧಿ ಕಾರ್ಯ ನಡೆದಿದ್ದು ಇದೀಗ ಆರ್ತಾಜೆ ಸಮೀಪ ಮುಖ್ಯ ರಸ್ತೆಗೆ ಬಂದು ಸೇರುವ ಕೆಲವು ಹೊಳ ರಸ್ತೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು, ಮತ್ತು ಅದರೊಂದಿಗೆ ಬರುವ ಮಣ್ಣು ಮುಖ್ಯ ರಸ್ತೆಗೆ ಬರುತ್ತಿದ್ದು ಈ ಭಾಗದಲ್ಲಿ ನಡೆದಾಡುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡುತ್ತಿದೆ.
ಕಳೆದ ಹಲವಾರು ದಿನಗಳಿಂದ ಈ ಪರಿಸರ ದಲ್ಲಿ ವಿದ್ಯುತ್ ಹೋಲ್ಟಜ್ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದು ಈ ಎಲ್ಲಾ ಸಮಸ್ಯೆಗಳ ಸ್ಪಂದನೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಯೊಂದಿಗೆ ಮಾತಾಡಿರುವ ಜಾಲ್ಸೂರು ಗ್ರಾಮ ಪಾಚಾಯತ್ ಸದಸ್ಯ ಮುಜೀಬ್ ಪೈಚಾರ್ ‘ಈ ಸಮಸ್ಯೆಗಳ ಬಗ್ಗೆ ಅನೇಕ ಭಾರಿ ನಮ್ಮ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ,ಮೆಸ್ಕಾಂ ಇಲಾಖೆಯ ಗಮನಕ್ಕೆ ನೀಡಿದ್ದರೂ ಇಲ್ಲಿಯವೆರೇಗೆ ಯಾವುದೇ ಸ್ಪಂದನೆ ದೊರಕುತ್ತಿಲ್ಲ ಎಂದು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.