ಚಂದ್ರಶೇಖರ ಎನ್.ಜಿ., ಹರೀಶ್ ಬೂಡುಪನ್ನೆ ಚುನಾವಣಾಧಿಕಾರಿಗಳಾಗಿ ನೇಮಕ
ಸುಳ್ಯ ವಕೀಲರ ಸಂಘದ ಈಗಿನ ಆಡಳಿತ ಮಂಡಳಿಯ ಎರಡು ವರ್ಷದ ಅವಧಿ ಪೂರ್ಣಗೊಂಡಿದ್ದು, ನೂತನ ಪದಾಧಿಕಾರಿಗಳ ಆಯ್ಕೆಗೆ ಆ.3ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಚುನಾವಣಾಧಿಕಾರಿಗಳನ್ನು ಸಭೆಯಲ್ಲಿ ನೇಮಿಸಲಾಗಿದೆ.
ಜೂ.29ರಂದು ನಡೆದ ವಕೀಲರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ದಿನ ನಿಗದಿ ಮಾಡಲಾಯಿತು.
ಸಂಘದ ಅಧ್ಯಕ್ಷ ನಾರಾಯಣ ಕೆ ಯವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು ವರದಿ ಮಂಡಿಸಿದರೆ, ಕೋಶಾಧಿಕಾರಿ ಜಗದೀಶ್ ಡಿ.ಪಿ. ಲೆಕ್ಕಪತ್ರ ಸಭೆಯ ಮುಂದಿಟ್ಟರು.
ಉಪಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗ್ರಂಥಾಲಯ ಕಾರ್ಯದರ್ಶಿ ಹರ್ಷಿತ್ ಕಾರ್ಜ, ಕ್ರೀಡಾ ಕಾರ್ಯದರ್ಶಿ ಸತೀಶ್ ಕುಂಭಕ್ಕೋಡು, ಸಾಂಸ್ಕೃತಿಕ ಕಾರ್ಯದರ್ಶಿ ಅಬೂಬಕ್ಕರ್ ಕೆ.ಎನ್., ಜತೆ ಕಾರ್ಯದರ್ಶಿ ಪಲ್ಲವಿ ಕೆ.ಎಲ್. ಇದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗೆ ಆ.3ರಂದು ಚುನಾವಣೆ ನಡೆಸಲು ನಿರ್ಣಯಕೈಗೊಳ್ಳಲಾಯಿತು. ಮುಖ್ಯಚುನಾವಣಾಧಿಕಾರಿಗಳಾಗಿ ಚಂದ್ರಶೇಖರ ಎನ್.ಜಿ., ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹರೀಶ್ ಬೂಡುಪನ್ನೆಯವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಮುಂದಿನ 15 ದಿನದಲ್ಲಿ ಚುನಾವಣಾ ವೇಳಾ ಪಟ್ಟಿಯನ್ನು ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆಂದು ತಿಳಿದುಬಂದಿದೆ.