ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಬದಿಯ ನಾವೂರು ರಸ್ತೆಯು ತೀರಾ ಹದೆಗೆಟ್ಟಿದ್ದು ರಸ್ತೆ ಕಾಂಕ್ರೀಟಿಕರಣಗೊಳಿಸಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ನಾವೂರು ಪರಿಸರದ ನಾಗರಿಕರು ಇಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಮುಖ್ಯ ರಸ್ತೆಯಿಂದ ಕೇವಲ 80 ಮೀಟರ್ ಉದ್ದದ ರಸ್ತೆಯು ಕಾಮಗಾರಿ ನಿರ್ವಹಿಸದೆ ಬಾಕಿಯಾಗಿದ್ದು ತೀರಾ ಹದಗೆಟ್ಟಿದೆ.
ಈ ರಸ್ತೆಯಲ್ಲಿ ದಿನ ನಿತ್ಯ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆದುಕೊಂಡು ಓಡಾಡಲು ತೀವ್ರ ಸಮಸ್ಯೆ ಉಂಟಾಗಿದೆ. ಸದ್ರಿ
ರಸ್ತೆಯ ಮೂಲಕ ಗ್ರೀನ್ ವ್ಯೂ ಶಾಲೆಗೆ ಮತ್ತು ಶಾರದಾ ವಿದ್ಯಾ ಸಂಸ್ಥೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಈ ಪರಿಸರದಲ್ಲಿ ಸುಮಾರು 30 ಮನೆಗಳಿದ್ದು ಎಲ್ಲರೂ ಈ ರಸ್ತೆಗೆಅವಲಂಬಿತರಾಗಿದ್ದಾರೆ. ವಾಹನ ಪಾರ್ಕಿಂಗ್ ವ್ಯವಸ್ಥೆಯು ಸಂಪೂರ್ಣ ವಾಗದ್ದರಿಂದ ಕಾಂಪ್ಲೆಕ್ಸ್ ಗೆ ಬರುವ ಗ್ರಾಹಕರು ಮತ್ತು ಸಿಬ್ಬಂದಿಗಳ ವಾಹನಗಳು ರಸ್ತೆ ಬದಿ ನಿಲ್ಲಿಸುವುದರಿಂದ ಸಂಚಾರಕ್ಕೂ ಅಡಚಣೆಯಾಗುತ್ತಿದೆ.
ಶೀಘ್ರವಾಗಿ
ಈ ರಸ್ತೆಯನ್ನು ಪರಿಗಣನೆಗೆ ತೆಗೆದುಕೊಂಡು ಕಾಂಕ್ರೀಟಿಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಕೋರಿ ನಾವೂರು ಪರಿಸರದ ನಾಗರಿಕರು ಇಂದು ತಾಲೂಕು ಪಂಚಾಯತ್ ನಲ್ಲಿ ಶಾಸಕರಿಗೆ ಮನವಿ ನೀಡುವ ಮೂಲಕ ಆಗ್ರಹಿಸಿದರು.
ಬಳಿಕ ಅಲ್ಲಿಂದ ನಗರ ಪಂಚಾಯತ್ ಗೆ ತೆರಳಿ ಪಂಚಾಯತ್ ಸದಸ್ಯ ಉಮ್ಮರ್ ರವರಿಗೂ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ನಾವೂರು ಭಾಗದ ಫಲಾನುಭವಿಗಳಾದ ಆನಂದ ಪೂಜಾರಿ, ಪರಮೇಶ್ವರ, ಚಂದಪ್ಪ, ಚಂದ್ರಶೇಖರ ಮತ್ತಿತರರು ಜತೆಯಲ್ಲಿದ್ದರು.