ಕಾಞಂಗಾಡ್-ಪಾಣತ್ತೂರು-ಸುಳ್ಯ ಅಂತರಾಜ್ಯ ಮಾರ್ಗದಲ್ಲಿ ಕೇರಳದ ಸರ್ಕಾರಿ ಬಸ್ ನೂತನ ಸಂಚಾರ ಪ್ರಾರಂಭ

0

ಕಾಞಂಗಾಡ್-ಪಾಣತ್ತೂರು-ಸುಳ್ಯ ಅಂತರಾಜ್ಯ ಮಾರ್ಗದಲ್ಲಿ ಕೇರಳದ ಸರ್ಕಾರಿ ಬಸ್ ನೂತನ ಸಂಚಾರ ಪ್ರಾರಂಭ ಮಾಡಿದೆ. ಬಸ್ ಸಂಚಾರವನ್ನು ಜನಪ್ರತಿನಿಧಿಗಳು ಮತ್ತು ಊರವರು ಸ್ವಾಗತಿಸಿದರು.

ಪ್ರೀತಿ ಕಲಾ ಮತ್ತು ಕ್ರೀಡಾ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ, ಪರಪ್ಪ ಬ್ಲೋಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ ಗೆ ಮೊದಲು 5 ಬಸ್ಸು ಸಂಚಾರ ನಡೆಸುತ್ತಿದ್ದು ನಂತರದ ಸಮಯಗಳಲ್ಲಿ ಕೇವಲ ಒಂದು ಸರ್ವಿಸ್ ಮಾತ್ರ ಸಂಚಾರ ನಡೆಸುತ್ತಿತ್ತು, ಹೆಚ್ಚಿಗೆ ಸರ್ವಿಸ್ ನಡೆಸುವಂತೆ ಪ್ರಯತ್ನದ ಫಲವಾಗಿ ಕಳೆದ ಒಂದು ವರ್ಷ ದಿಂದ ಎರಡನೇ ಸರ್ವಿಸ್ ಪುನರಾರಂಭಿಸಲಾಗಿದೆ, ಇಂದು ಸತತ ಪ್ರಯತ್ನದ ಫಲವಾಗಿ ಮೂರನೇ ಸರ್ವಿಸ್ ಪುನರಂಬಿಸಲಾಗಿದೆ, ನಮ್ಮ ಸುಳ್ಯ ಪಾಣತ್ತೂರು ರಸ್ತೆಯಲ್ಲಿ ಓಡಾಡಬೇಕಾಗಿದ್ದ ಎಲ್ಲಾ 5 ಸರ್ವಿಸ್ ನಡೆಸುವಂತೆ ಮುಂದಿನ ದಿನಗಳಲ್ಲಿ ಪ್ರಯತ್ನ ಪಡಲಾಗುವುದು, ಇನ್ನು ಉಳಿದ ಎರಡು ಸರ್ವಿಸ್ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು, ಎಂದು ಹೇಳಿದರು, ಅಲ್ಲದೇ ಕರ್ನಾಟಕದ ಭಾಗದ ಬಡ್ಡಡ್ಕ ದಿಂದ ನಾರ್ಕೋಡು ವರೇಗೆ ರಸ್ತೆ ತುಂಬಾ ಹದಗಟ್ಟಿದೆ ಈ ರಸ್ತೆಯನ್ನು ಸಂಚಾರ ಯೋಗ್ಯ ಮಾಡುವಂತೆ ಅಲ್ಲಿನ ಜನಪ್ರತಿನಿಧಿಗಳು ಗಮನ ಹರಿಸಬೇಕು. ಅಲ್ಲದೆ ಕರ್ನಾಟಕದಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸು ಕೇರಳಕ್ಕೂ ಓಡಾಟ ನಡೆಸಬೇಕು. ಕೇರಳ ಮತ್ತು ಕರ್ನಾಟಕ ಎರಡು ಸರಕಾರಗಳ ಒಪ್ಪಂದ ಪ್ರಕಾರ ಕರ್ನಾಟಕದ ಕಡೆಯೂ 2 ಪರ್ಮಿಟ್ ಗಳು ಇವೆ, ಇದನ್ನು ಉಪಯೋಗಿಸಿಕೊಂಡು ಕರ್ನಾಟಕದ ರಸ್ತೆ ಸಾರಿಗೆ ಬಸ್ಸು ಈ ರಸ್ತೆಯಲ್ಲಿ ಓಡಾಟ ನಡೆಸಬೇಕು. ಸುಳ್ಯದ ಶಾಸಕರು, ಬಡ್ಡಡ್ಕ-ಸುಳ್ಯ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸಬೇಕು ಮತ್ತು ಕರ್ನಾಟಕ ಸಾರಿಗೆ ಬಸ್ಸು ಓಡಾಟ ನಡೆಸುವಂತೆ ಕ್ರಮ ಕೈಗೊಳ್ಳಬೇಕು, ರಸ್ತೆ ಯೋಗ್ಯ ಸ್ಥಿತಿಯಲ್ಲಿ ಇದ್ದರೆ ನಮಗೆ ಬಸ್ಸು ಇನ್ನು ಹೆಚ್ಚಾಗಿ ಓಡಾಟ ನಡೆಸುವಂತೆ ಒತ್ತಡ ಹೇರಬಹುದು ಎಂದರು..

ಕಾರ್ಯಕ್ರಮದಲ್ಲಿ, ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ದಾಮೋದರ, ಮಾಜಿ ಪಂಚಾಯತ್ ಸದಸ್ಯರು ಶ್ರೀಮತಿ ಲಿಸ್ಸೀಜೋನ್, ಮತ್ತಿತರ ಪ್ರಮುಖರು ಭಾಗವಹಿಸಿದರು, ಕಾರ್ಯಕ್ರಮ ಕ್ಕೆ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಚಿದಾನಂದ ಜಿ ಸ್ವಾಗತಿಸಿ ವಸಂತ ಯಂಯಂ ವಂದಿಸಿದರು,