ಕೆಎಸ್‌ಆರ್‌ಟಿಸಿ ಚಾಲಕ ಅಪ್ಪು ನಾಯ್ಕ ರವರಿಗೆ ಸೇವಾ ನಿವೃತ್ತಿ

0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಕೊಳ್ತಿಗೆ ಗ್ರಾಮದ ಆಟೋಳಿ ನಿವಾಸಿ ಮೂಲತ: ಜಾಲ್ಸುರಿನವರಾದ ಅಪ್ಪು ನಾಯ್ಕರವರು ಜೂ.30 ರಂದು ಕರ್ತವ್ಯದಿಂದ ನಿವೃತ್ತಿಯಾಗಿದ್ದಾರೆ.

1994ರಿಂದ 2024 ರವರೆಗೆ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 15 ವರ್ಷಗಳ ಕಾಲ ಮಡಿಕೇರಿ ವಿಭಾಗದಲ್ಲಿ ಹಾಗೂ 2008ರಿಂದ ಪುತ್ತೂರು ಕ.ರಾ.ರ.ಸಾ.ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಪಘಾತ ಮತ್ತು ಅಪರಾಧ ರಹಿತ ಚಾಲನೆಗಾಗಿ ಇವರು 2017ರಲ್ಲಿ ಬೆಳ್ಳಿ ಪದಕಕ್ಕೆ ಪುರಸ್ಕೃತರಾಗಿದ್ದಾರೆ.

ಜಾಲ್ಸುರು ಗ್ರಾಮದ ಮರಸಂಕ
ದಿ. ಅಪ್ಪಯ್ಯ ನಾಯ್ಕ ಮತ್ತು ದಿ. ಅಮ್ಮಕ್ಕ ದಂಪತಿಗಳ ಪುತ್ರರಾಗಿರುವ ಇವರು ಪ್ರಸ್ತುತ ಪೆರ್ಲoಪಾಡಿಯ ಕೊಳ್ತೀಗೆ ಸಮೀಪ ಆಟೋಳಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಪತ್ನಿ ಭವಾನಿಶಂಕರಿ ಗ್ರಹಿಣಿ, ಪುತ್ರಿ ಜಯಲಕ್ಷ್ಮೀ ಯವರು ಇಂಜಿನಿಯರ್ ಕಲಿತು ಬೆಂಗಳೂರಿನ ಎಬಿಜಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಮನೋಜ್‌ ಕುಮಾರ್‌ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರ್ ( ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ) ವಿದ್ಯಾರ್ಥಿ.