ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ಸಭೆ

0

ರಸ್ತೆ, ವಿದ್ಯುತ್, ಎನ್.ಒ.ಸಿ.ನೀಡಿದ ಬಗ್ಗೆ ಭಾರೀ ಚರ್ಚೆ

ಐವರ್ನಾಡು ಗ್ರಾಮ ಪಂಚಾಯತ್ ನ 2024 – 25 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಜು.03 ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಐವರ್ನಾಡು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ಸ್ವಾಗತಿಸಿ,ವರದಿ ಮಂಡಿಸಿದರು.
ಯುವ ಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ರಸ್ತೆ ಅಭಿವೃದ್ಧಿ,ವಿದ್ಯುತ್ ಸಮಸ್ಯೆ,ಬಾಂಜಿಕೋಡಿಯಲ್ಲಿ ಎನ್.ಒ.ಸಿ ನೀಡಿದ ಬಗ್ಗೆ ತೀವ್ರ ಚರ್ಚೆಗಳು ನಡೆದವು.