ಸುಳ್ಯ ರೋಟರಿ ವಿದ್ಯಾಸಂಸ್ಥೆಗೆ ಕರ್ನಾಟಕ ಬ್ಯಾಂಕ್ ನಿಂದ ರೂ.10 ಲಕ್ಷ ದೇಣಿಗೆ

0

ಸುಳ್ಯ ರೋಟರಿ ವಿದ್ಯಾಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ಬ್ಯಾಂಕ್ ನ ಸಿಎಸ್ ಆರ್ ಫಂಡ್ ನಿಂದ ರೂ.10 ಲಕ್ಷ ದೇಣಿಗೆ ಮಂಜೂರುಗೊಂಡಿದೆ.

ನಮ್ಮ ಕೋರಿಕೆಯ ಮೇರೆಗೆ ವಿದ್ಯಾಸಂಸ್ಥೆಯ ಅಭಿವೃದ್ಧಿ ಗೆ ಕರ್ನಾಟಕ ಬ್ಯಾಂಕ್ ನವರು ರೂ. 10 ಲಕ್ಷ ಅನುದಾನ ನೀಡಿದ್ದು, ಈ ಅನುದಾನದಲ್ಲಿ ರೋಟರಿ ಪ್ರಾಥಮಿಕ ಶಾಲೆಯ ಆವರಣಕ್ಕೆ ಮೇಲ್ಚಾವಣಿ ಮಾಡಲು ನಿರ್ಧರಿಸಲಾಗಿದೆ ಎಂದು ಶಾಲಾ ನಿಕಟಪೂರ್ವ ಸಂಚಾಲಕ ಗಿರಿಜಾಶಂಕರ ತುದಿಯಡ್ಕ ತಿಳಿಸಿದ್ದಾರೆ.