ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿಯವರ ಚಾತುರ್ಮಾಸ ಕಾರ್ಯಕ್ರಮ ಜು. 21ರಿಂದ ಸೆ. 22ರ ತನಕ ಬೆಂಗಳೂರಿನ ತ್ರಿಗುಣಾತ್ಮಿಕ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಜುಮ 4ರಂದು ಬೆಳ್ಳಾರೆಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸರಸ್ವತಿ ಕೋ-ಆಪರೇಟ್ವಿ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಆರ್ ಸತೀಶ್ಚಂದ್ರ, ನಿವೃತ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ನಾಯಕ್ ಕುಂಡೇರಿ, ಪುರೋಹಿತ ಜಯರಾಮ ಭಟ್ ಕಕ್ಕೆಬೆಟ್ಟು, ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ. ಸುರೇಶ್ ಶೆಣೈ, ಬಿ. ಮಿಥುನ್ ಶೆಣೈ, ಮಹಾಲಕ್ಷ್ಮಿ ಬೋರ್ ವೆಲ್ಸ್ ಮಾಲಕ ಸಂಜೀವ ನಾಯಕ್, ಪಿ.ಡಬ್ಲೂ.ಡಿ ಗುತ್ತಿಗೆದಾರ ನವೀನ್ ಸುಳ್ಳಿ, ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ವಾಸುದೇವ ನಾಯಕ್ ಐಗುಳಮಕ್ಕಿ, ಅನಂತಕೃಷ್ಣ ಪ್ರಭು ಕುಂಟಿನಿ, ವಾಮನ ನಾಯಕ್, ಕೃಷ್ಣ ನಾಯಕ್ ಮೂಡಾಯಿತೋಟ, ಸುಭಾಶ್ಚಂದ್ರ ಎರ್ಮೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಾತುರ್ಮಾಸಕ್ಕೆ ದೇಣಿಗೆ ಮತ್ತು ಹೊರೆಕಾಣಿಕೆ ನೀಡುವವರು ರಾಜೇಶ್ ಶ್ಯಾನುಭಾಗ್ ಮಣಿಕ್ಕಾರ, ಮಿಥುನ್ ಶೆಣೈ ಬೆಳ್ಳಾರೆ ಮತ್ತು ಗೋಪಾಲಕೃಷ್ಣ ಪೊಸವಳಿಗೆ ಪಂಜಿಗಾರು ಮತ್ತು ಲಕ್ಷ್ಮೀನಾರಾಯಣ ಶ್ಯಾನುಭಾಗ್ ಮಣಿಕ್ಕಾರ ರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.