ಸುಬ್ರಹ್ಮಣ್ಯ: ಸ್ಥಾನ ಘಟ್ಟದಲ್ಲಿ ಭಕ್ತಾದಿಗಳಿಗೆ ತೀರ್ಥ ಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ

0

ಮಳೆಗಾಲದ ಸಮಯದಲ್ಲಿ ಕುಮಾರಧಾರ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸ್ಥಾನಘಟ್ಟದಲ್ಲಿ ನೀರಿನ ಸೆಳೆತ ಜಾಸ್ತಿ ಇರುವುದರಿಂದ ಸುಮಾರು ಒಂದು ವಾರದಿಂದೀಚೆ ಭಕ್ತಾದಿಗಳಿಗೆ ತೀರ್ಥ ಸ್ಥಾನಕ್ಕೆ ಅವಕಾಶವಿರಲಿಲ್ಲ .

ಇದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ತೀರ್ಥ ಸ್ಥಾನ ಮಾಡಲು ಕುಮಾರಧಾರ ಸ್ಥಾನಗಟ್ಟದಲ್ಲಿ ದೇವಳದ ವತಿಯಿಂದ ನೀರಿನ ಡ್ರಮ್ಮುಗಳನ್ನು ಇಟ್ಟು ಅವಕಾಶ ಮಾಡಿಕೊಟ್ಟಿರುತ್ತಾರೆ .

ಇದನ್ನು ದೇವಳಕ್ಕೆ ಬರುವ ಭಕ್ತಾದಿಗಳು ಉಪಯೋಗಿಸಿಕೊಳ್ಳಬಹುದಾಗಿದೆ. ಸ್ನಾನ ಘಟ್ಟದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸ್ನಾನ ಘಟ್ಟಕ್ಕೆ ಯಾತ್ರಾರ್ಥಿಗಳು ಇಳಿಯುವುದನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ನಾನ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷ ವಿಶ್ವನಾಥ ನಡುತೋಟ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಪುತ್ತೂರಿನ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ.