ಸುಂದರ ಸುಳ್ಯ ನಿರ್ಮಿಸಲು ಯೋಜನೆಗಳ ಮಾಹಿತಿ ನೀಡಿದ ಎ.ಸಿ.ಜುಬಿನ್ ಮಹಾಪಾತ್ರ
ನಿವೇಶನ ಹಂಚಿಕೆಗೆ ಜಾಗ ನೀಡಲು 10 ಎಕ್ರೆ ಭೂಮಿ ಗುರುತಿಸಿ : ಸದಸ್ಯರ ಅಹವಾಲು
ಸುಳ್ಯ ನಗರ ಪಂಚಾಯತ್ ನಲ್ಲಿ ಜು. 4ರಂದು ಪುತ್ತೂರು ಉಪವಿಭಾಗಾಧಿಕಾರಿಯವರ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು, ಸಿಬ್ಬಂದಿಗಳ ಸಭೆ ನಡೆದು ಸದಸ್ಯರುಗಳು ಹೇಳಿದ ನಗರದ ಎಲ್ಲಾ ಸಮಸ್ಯೆಗಳ ಬಗ್ಗೆ ಮನ ಮುಟ್ಟುವ ರೀತಿಯಲ್ಲಿ ಪರಿಹಾರದ ಮಾರ್ಗಗಳನ್ನು ನೀಡಿರುವ ಕುರಿತು ವರದಿಯಾಗಿದೆ.
ಅಲ್ಲದೆ ಬೇರೆ ಬೇರೆ ನಗರಗಳಲ್ಲಿ ಅವರು ನೋಡಿ ಬಂದಿರುವ ಉತ್ತಮ ಉತ್ತಮ ವ್ಯವಸ್ಥೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸಿ ಸುಂದರ ಸುಳ್ಯವನ್ನು ರೂಪಿಸುವ ಕುರಿತು ಸುದೀರ್ಘ ಮಾಹಿತಿ ನೀಡಿ ಸಭೆಯಲ್ಲಿ ಗಮನ ಸೆಳೆದರು.
ನ ಪಂ ಮುಖ್ಯಾಧಿಕಾರಿ ಸುಧಾಕರ್ ರವರು ಸ್ವಾಗತಿಸಿ ಸಭೆ ಆರಂಭಿಸಿದರು.
ಮುಖ್ಯಾಧಿಕಾರಿ ಪಂಚಾಯತ್ ವತಿಯಿಂದ ಈ ವರೆಗೆ ಆಗಿದೆ ಮತ್ತು ಮುಂದಿನ ಆದ. ಕೆಲಸಗಳು, ಯೋಜನೆಗಳು, ಯಾವುದೆಲ್ಲಾ ರೂಪಿಸಿಕ್ಕೊಳ್ಳಲಾಗಿದೆ ಎಂಬುವುದರ ಬಗ್ಗೆ ಮಾಹಿತಿ ನೀಡಿ ಸುಳ್ಯದಲ್ಲಿ ಆರಂಭ ಗೊಂಡಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿ, ಕಸ ಬರ್ನಿಂಗ್ ಮಾಡುವ ಕುರಿತು, ನೀರಿನ ಟ್ಯಾಂಕ್ ನಿರ್ಮಿಸುವ ಕುರಿತು, ಕಸ ವಿಲೇವಾರಿ ಜಾಗದ ಸಮಸ್ಯೆಗಳ ಬಗ್ಗೆ, ಅದರ ಬಗ್ಗೆ ಯಾವುದೆಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂಬಿತ್ಯಾದಿ ವಿಷಯಗಳನ್ನು ಅವರ ಗಮನಕ್ಕೆ ತಂದರು.
ಈ ವೇಳೆ ಎದ್ದು ನಿಂತ ಸದಸ್ಯ ಶರೀಫ್ ಕಂಠಿ ನಮ್ಮಲ್ಲಿ ಬರೇ ಸಮಸ್ಯೆಗಳೇ ಇರುವುದು ಸಾರ್. ಮೊದಲಿಗೆ ನಮ್ಮ ಕಚೇರಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಾದ ಇಂಜಿನಿಯರ್,ಹೆಲ್ತ್ ಆಫೀಸರ್, ರೆವಿನ್ಯೂ ಆಫೀಸರ್ ಈ ರೀತಿ ಯಾವುದೇ ರೆಗ್ಯುಲರ್ ಅಧಿಕಾರಿಗಳಿಲ್ಲದೆ ಯಾವುದೇ ಕೆಲಸ ಕಾರ್ಯ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ ಎಂದರು.
ಸದಸ್ಯ ಧೀರಾ ಕ್ರಾಸ್ತಾ ರವರು ನಗರದ ನೀರಿನ ಪೈಪ್ ಅಳವಡಿಕೆಗೆ ತೆಗೆದ ಗುಂಡಿಗಳಿಂದ ಆಗಿರುವ ಸಮಸ್ಯೆ ಕುರಿತು ವಿವರಿಸಿದರು.
ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊ ಮಾತಾಡಿ ಮೆಸ್ಕಾಂ ಇಲಾಖೆಯವರು ಆಲೆಟ್ಟಿ ತಿರುವು ಬಳಿ ರಸ್ತೆಯಲ್ಲಿ ವಿದ್ಯುತ್ ಕಂಬ ಅಳವಡಿಸಿ ಸಮಸ್ಯೆ ಮಾಡಿದ್ದಾರೆ. ಕೇಳಿದರೆ ಸರಿ ಪಡಿಸಿ ಕೊಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಜನರಿಗೆ ಸಮಸ್ಯೆ ಆಗುತ್ತಿದೆ ಎಂದರು.
ಸದಸ್ಯರಾದ ಎಂ ವೆಂಕಪ್ಪ ಗೌಡ ಮೊದಲಿಗೆ ಕುರುಂಜಿಗುಡ್ಡೆ ಪಾರ್ಕ್ ನ.ಪಂ. ಅನುದಾನ ಬಳಸಿ ನಿರ್ವಹಣೆ ಮಾಡದಿರುವ ಕುರಿತು ಮತ್ತು ಪತ್ರಿಕೆಗಳಲ್ಲಿ ಪಾರ್ಕಿನ ಬಗ್ಗೆ ಬಂದಿರುವ ವರದಿಯ ಬಗ್ಗೆ
ಬೀರಮಂಗಿಲದಲ್ಲಿ ನಿರ್ಮಾಣ ವಾದ ಪಾರ್ಕ್ ಇಂದಿಗೂ ಸರಿಯಾಗಿಲ್ಲ. ವಿಶೇಷವಾಗಿ ನ. ಪಂ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ಸಿಬಂದಿಗಳು ಆಡಳಿತ ಪಕ್ಷದ ಮಹಿಳಾ ಸದಸ್ಯರುಗಳಿಗೆ ಗೌರವವನ್ನೇ ಕೊಡುತ್ತಿಲ್ಲ. ಸುಳ್ಯದ ಟೌನ್ ಹಾಲ್ ಪರಿಸ್ಥಿತಿ ಹದಗೆಟ್ಟಿದೆ ಅದನ್ನು ಕೂಡಲೇ ಸರಿಪಡಿಸಿ ಜನತೆಗೆ ಉಪಕಾರಗೊಳಿಸಿ ಕೊಡುವಂತೆ ಕೇಳಿಕೊಂಡರು.
ಸದಸ್ಯ ರಿಯಾಜ್ ಕಟ್ಟೆಕಾರ್ ಮಾತನಾಡಿ ಸುಳ್ಯದಲ್ಲಿ ರುದ್ರ ಭೂಮಿ ಒಂದು ಸರಿ ಇಲ್ಲ. ನಮ್ಮಲ್ಲಿ ಇರುವ ರುದ್ರಭೂಮಿಗಳಲ್ಲಿ ಸರಿಯಾಗಿ ವ್ಯವಸ್ಥೆಗಳು ಇಲ್ಲದೇ ಕೊಡಿಯಾಲ ಗ್ರಾಮದ ರುದ್ರಭೂಮಿಯನ್ನು ಅವಲಂಭಿಸ ಬೇಕಾಗಿದೆ. ಪಂಚಾಯತ್ನಲ್ಲಿ ಶಕ್ಕಿಂಗ್ ಮೆಸಿನ್ ಇಲ್ಲಾ.ಮೂಲಭೂತ ವ್ಯವಸ್ಥೆಯಲ್ಲಿ ಒಂದಾದ ಕಲ್ಲು ಮುಟ್ಲು ನೀರಿನ ಘಟಕದಲ್ಲಿ ಕರೆಂಟ್ ಹೋಗುವ ಸಂಧರ್ಭ ಜನರೇಟರ್ ವ್ಯವಸ್ಥೆ ಇಲ್ಲದೇ ಇದ್ದು ನೂತನ ಜನರೇಟರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೇಳಿಕ್ಕೊಂಡರು.
ಕೆ ಎಸ್ ಉಮ್ಮರ್ ಮಾತನಾಡಿ ನಮ್ಮಲ್ಲಿ ಪೌರ ಕಾರ್ಮಿಕ ಹುದ್ದೆ ಸುಮಾರು 10,12 ಪೋಸ್ಟ್ ಖಾಲಿ ಇದ್ದು ಅದನ್ನು ಭರ್ತಿ ಮಾಡಿ ಕೊಡಲು ನಿರ್ಣಯ ಕೈಗೊಂಡು ಸರಕಾರದ ಗಮನಕ್ಕೆ ನೀಡಬೇಕು. ಅಲ್ಲದೆ ಹಲವಾರು ವರ್ಷಗಳಿಂದ ನೀರಿನ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವವರ ಹೊಸ ಟೆಂಡರ್ ಕರೆದು ಅದನ್ನು ಸರಿಪಡಿಸಬೇಕು. ಆಶ್ರಯ ಯೋಜನೆಯಲ್ಲಿ ಮನೆಗೆ ಅರ್ಜಿ ಹಾಕಿ ಹಲವಾರು ಮಂದಿ ಕಾಯುತ್ತಿದ್ದು ಅದಕ್ಕೆ ಪರಿಹಾರ ಮಾಡಬೇಕೆಂದು ಹೇಳಿದರು. ಕಸ ವಿಲೇವಾರಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದ್ದು ಇಂದಿಗೂ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಹೇಳಿದರು. ತಾವು ಖುದ್ದು ಕಲ್ಚರ್ಪೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ಸರಿಯಾದ ವ್ಯವಸ್ಥೆ ಮಾಡಿ ಕೊಡುವಂತೆ ಕೇಳಿಕೊಂಡರು.
ವಿನಯ ಕುಮಾರ್ ಕಂದಡ್ಕ ರವರು ಮಾತನಾಡಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭಿಸಿದ್ದು ಅದಕ್ಕೆ ಟ್ಯಾಂಕ್ ಗಳನ್ನು ನಿರ್ಮಿಸಲು ನಗರದ ಬೇರೆ ಬೇರೆ ಕಡೆಗಳಲ್ಲಿ ಜಾಗದ ಗುರುತು ಮಾಡಲಾಗಿದೆ. ಆದರೆ ಬೀರ ಮಂಗಿಲ ಐ ಬಿ ಬಳಿ ಟ್ಯಾಂಕ್ ನಿರ್ಮಿಸಲು ಯೋಜನೆ ಹಾಕಿದ್ದ ಜಾಗ ಈಗ ಖಾಸಗಿಯವರ ಮತ್ತು ಪಿ ಡಬ್ಲ್ಯೂ ಡಿ ಯವರ ವಿಷಯದಿಂದಾಗಿ ಅದು ಈಗ ಪಿ ಡಬ್ಲ್ಯೂ ಡಿ ಯವರ ಅಧೀನಕ್ಕೆ ಹೋಗಿದ್ದು ಇದರ ಸಂಬಂಧಪಟ್ಟವರಲ್ಲಿ ಮಾತನಾಡಿ ಟ್ಯಾಂಕ್ ನಿರ್ಮಿಸಲು ಅನುಮತಿ ಮಾಡಿ ಕೊಡಬೇಕು.ಆಶ್ರಯ ಯೋಜನೆ ಮನೆ ನೀಡಿದಲ್ಲಿ ಕೆಲವರು ಅದರ ದುರುಪಯೋಗ ಮಾಡಿಕೊಂಡಿದ್ದು ಇದನ್ನು ಸರಿ ಪಡಿಸಿ ಅರ್ಹರಿಗೆ ಸಿಗುವಂತೆ ಮಾಡಬೇಕು. ಮತ್ತು ಜಯನಗರ ಮಿಲಿಟರಿ ಗ್ರೌಂಡ್ ಸ್ಥಳದಲ್ಲಿ ಅಲ್ಲಿಯೂ ಕೂಡ ಕೆಲವರು ಅವರಲ್ಲಿರುವ ಹೆಚ್ಚಿನ ಸರಕಾರಿ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿ ಅವ್ಯವಹಾರ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಲ್ಲು ಮುಟ್ಲು ಬಳಿ ಖಾಸಗಿ ವ್ಯಕ್ತಿಯೊಬ್ಬರ ತಪ್ಪಿನಿಂದ ಮುಂದಿನ ದಿನಗಳಲ್ಲಿ ಗುಡ್ಡವೇ ಜರಿದು ಬೀಳುವ ಪರಿಸ್ಥಿತಿ ನಿರ್ಮಾಣ ವಾಗಿದೆ ಇದನ್ನು ಅಧಿಕಾರಿಗಳು ಸರಿಪಡಿಸಿಕ್ಕೊಳ್ಳ ಬೇಕೆಂದು ಕೇಳಿಕೊಂಡರು.ನಗರದ ಬಡ ಜನರಿಗೆ ಆಶ್ರಯ ಮನೆ ನೀಡಲು, ಮತ್ತು ಕಸ ವಿಲೇವಾರಿಗೆ ಸುಮಾರು 15 ಎಕ್ಕರೆ ಜಾಗ ಬೇಕಾಗಿದ್ದು ಇದಕ್ಕೆ ಸೂಕ್ತ ಸ್ಥಳಕ್ಕೆ ಜಾಗ ನೀಡ ಬೇಕೆಂದು ಹೇಳಿದರು.
ಸದಸ್ಯೆ ಶಶಿಕಲಾ ನೀರಬಿದ್ರೆ ಮಾತನಾಡಿ ನಮ್ಮ ವಾರ್ಡಿನಲ್ಲಿ ಕೆಲವು ಜನರು ಕಸವನ್ನು ನದಿನೀರಿಗೆ ಹಾಕುತ್ತಿದ್ದು ಈ ಬಗ್ಗೆ ಕಚೇರಿಯಲ್ಲಿ ಬಂದು ಹೇಳಿದರೆ ಯಾವುದೇ ಕ್ರಮ ಕೈ ಗೋಳುತ್ತಿಲ್ಲ ಎಂದರು.
ಸುಳ್ಯ ಸರಕಾರಿ ಆಸ್ಪತ್ರೆಯ ಕೊಳಚೆ ನೀರು ರಸ್ತೆ ಬದಿಯ ಚರಂಡಿಗೆ ಬರುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಿದೆ ಎಂದು ಸದಸ್ಯೆ ಶೀಲಾ ಕುರುಂಜಿ ಎ ಸಿ ಯವರ ಬಳಿ ಹೇಳಿದರು.
ಸುಳ್ಯ ನಗರದ ಹೆದ್ದಾರಿಯ ಹೊಂಡ, ಗುಂಡಿಗಳ ಕುರಿತು ನಾಮ ನಿರ್ದೇಶಕ ಸದಸ್ಯ ರಾಜು ಪಂಡಿತ್ ಎ ಸಿ ಯವರ ಗಮನಕ್ಕೆ ತಂದರು.
ಸದಸ್ಯರು ಸಮಸ್ಯೆಗಳನ್ನು ಹೇಳಿಕೆ ಕೊಂಡಾಗ ಪ್ರತಿಯೊಂದನ್ನು ದಾಖಲಿಸಿಕ್ಕೊಂಡಿದ್ದ ಎ ಸಿ ಯವರು ಕೊನೆಗೆ ಒಂದೊಂದೇ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗಗಳನ್ನು ಹೇಳಿ ಕಸದ ಸಮಸ್ಯೆ ಬಗ್ಗೆ ಕೂಡಲೇ ಅಧಿಕಾರಿಗಳ ಮಟ್ಟದಲ್ಲಿ ಸಭೆ ಸೇರಿ ಜಾಗದ ಸಮಸ್ಯೆಗೆ ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಸೂಕ್ತ ವ್ಯವಸ್ಥೆಯ ಬಗ್ಗೆ ಚರ್ಚಿಸುವ ಭರವಸೆ ನೀಡಿದರು.ಅಲ್ಲದೆ ಸದಸ್ಯರು ಮತ್ತು ನಾವೆಲ್ಲರೂ ಸೇರಿ ಇದೇ ಕಸವನ್ನು ರಸ ಮಾಡುವ ಮೂಲಕ ವೇಸ್ಟ್ ಪಾರ್ಕ್ ಅಂದರೆ ಕಸದಲ್ಲಿ ಬರುವ ಪ್ಲಾಸ್ಟಿಕ್ ಗಳನ್ನು ಬಳಸಿ ಅದಕ್ಕೆ ಸುಂದರ ಆಕೃತಿಗಳನ್ನು ನೀಡಿ ಪಾರ್ಕ್ ಮಾಡುವ ಮೂಲಕ ಹೊಸ ರೂಪವನ್ನು ನೀಡುವ ಕಾರ್ಯ ಮಾಡಿ ಜನಾಕರ್ಷಣೆ ಮಾಡುವ ಕೆಲಸ ಮಾಡಬಹುದು. ಬೇಕಾದರೆ ಅದಕ್ಕೆ ನಾನೇ ನಿಮ್ಮೊಂದಿಗೆ ನಿಂತು ಪ್ರಯತ್ನಿ ಸುತ್ತೇನೆ ಎಂದರು.
ಯಾವುದೇ ಸ್ಥಳೀಯ ಆಡಳಿತಕ್ಕೆ ಅನುದಾನ ಬಹು ಮುಖ್ಯ.ಪಂಚಾಯತ್ ಗಳಿಗೆ ಆದಾಯ ಮುಖ್ಯವಾಗಿದ್ದು ಪಾರ್ಕ್ ಇನ್ನಿತರ ವ್ಯವಸ್ಥೆಗಳನ್ನು ಮಾಡಿ ಅದರಲ್ಲಿ ಬರುವ ಐನೂರೋ, ಸಾವಿರವನ್ನು ಅದರ ನಿರ್ವಹಣೆಗೆ ಇಡುವ ಮೂಲಕ ಅಭಿವೃದ್ಧಿ ಪಡಿಸಲು ಸಾಧ್ಯ. ಸುಳ್ಯದಲ್ಲಿ ಎಲ್ಲಿಯೂ ಪ್ರವಾಸಿ ತಾಣವಿಲ್ಲ. ಎಲ್ಲಾರು ಸೇರಿ ಅದರ ಬಗ್ಗೆ ಗಮನ ಕೊಡಿ. ಬೇರೆ ಬೇರೆ ನಗರಗಳಲ್ಲಿ ಪಾರ್ಕ್, ಹೋಮ್ ಸ್ಟೇ, ಮುಂತಾದ ವರಮಾನಗಳು ಬರುವ ಕೇಂದ್ರಗಳು ಇದ್ದು ಅವುಗಳು ಆ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಮಾಡುತ್ತೆ.
ನಮ್ಮಲ್ಲಿ ಮಹಿಳಾ ಸಂಘಗಳು ಹೆಚ್ಚಾಗಿದ್ದು ಅವರು ಮನೆಗಳಲ್ಲಿ, ಸಂಸ್ಥೆಗಳಲ್ಲಿ ತಯಾರಿಸುವ ವಸ್ತುಗಳಿಗೆ ಮಾರಾಟ ಮಾಡಲು ಕೇಂದ್ರಗಳನ್ನು ಸ್ಥಾಪಿಸಿ ನಮ್ಮಲ್ಲಿ ಬರುವ ಪ್ರಾವಾಸಿಗರನ್ನು ಸೆಳೆಯುವ ಕಾರ್ಯಗಳನ್ನು ಮಾಡಿ ಸುಳ್ಯವನ್ನು ಯಾತ್ರಾ ಕೇಂದ್ರವಾಗಿ ಮಾಡಲು ಸಾಧ್ಯ ವಾಗುತ್ತದೆ.
ನಮ್ಮ ಇಂಡೋರ್ ಸ್ಟೇಡಿಯಂ ಬಳಿ ಓರ್ವ ಪೌರಕಾರ್ಮಿಕರಿಗೆ ಒಂದು ಮನೆ ಮಾಡಿ ಕೊಟ್ಟು ಅದರ ನಿರ್ವಹಣೆಯ ಅವಕಾಶವನ್ನು ಮಾಡಿಕ್ಕೊಟ್ಟು ಆಟಗಾರರಿಂದ ಶುಲ್ಕವನ್ನು ಪಡೆದು ನಗರ ಪಂಚಾಯತ್ ಗೆ ಆದಾಯ ಬರುವ ರೂಪದಲ್ಲಿ ಮಾಡುವ ಕಾರ್ಯಕ್ಕೆ ಮುಂದಾಗಿ.
ನೀವೆಲ್ಲರೂ ಇಂದಿನ ಸುಳ್ಯದ ಬಗ್ಗೆ ಯೋಚಿಸದೆ 20 ವರ್ಷಗಳ ಬಳಿಕದ ಸುಳ್ಯದ ಬಗ್ಗೆ ಕನಸುಕಾಣಿ ಎಂದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಬಳಿಕ ಉಳಿದ ವಿಷಯಗಳ ಬಗ್ಗೆ ಮತ್ತೆ ಸಭೆ ಸೇರಿ ಪರಸ್ಪರ ಸಲಹೆ ಸೂಚನೆಗಳನ್ನು ಪಡೆಯೋಣ ಎಂದು ಈ ಸಭೆಗೆ ವಿರಾಮ ನೀಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಮಂಜುನಾಥ್, ಕೃಷಿ ಇಲಾಖೆ ಅಧಿಕಾರಿ ಗುರುಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ನ ಪಂ ಸದಸ್ಯರು, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.