ಸುಬ್ರಹ್ಮಣ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸತೀಶ ಸಪಲ್ಯ ನೇಮಕ

0

ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸತೀಶ ಸಪಲ್ಯ ಜುಲೈ 3 ರಂದು ಬುಧವಾರ ಅಧಿಕಾರ ಸ್ವೀಕರಿಸಿದರು.

2006ರಲ್ಲಿ ವಿಟ್ಲ 110 ಕೆ. ವಿ. ಸ್ಟೇಷನ್ ನಲ್ಲಿ ಜೆಇ ಆಗಿ ಸೇರ್ಪಡೆಗೊಂಡಿದ್ದು, ನಂತರ ಶಾಲೆತ್ತೂರು ಉಪ ವಿಭಾಗದಲ್ಲಿ ಶಾಖಾಧಿಕಾರಿಯಾಗಿ, ಅಲ್ಲಿಂದ ಬಡ್ತಿ ಹೊಂದಿ ಬಂಟ್ವಾಳ ಮೆಸ್ಕಾಂ ವಿಭಾಗದಲ್ಲಿ ಸಹಾಯಕ ಇಂಜಿನಿಯರಾಗಿ ಸೇವೆ ಸಲ್ಲಿಸಿ, 2018 ರಿಂದ ಮೇಸ್ಕಾಂ ವಿಟ್ಲ ಸೆಕ್ಷನ್ ಆಫೀಸರ್ ಆಗಿ ಸೇವೆಯನ್ನು ಸಲ್ಲಿಸಿ, ಅಲ್ಲಿಂದ ಬಡ್ತಿ ಹೊಂದಿ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ನೇಮಕಗೊಂಡರು.