ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ “ನರೇಂದ್ರ ವಿಹಾರ”ದ ನಾಮಫಲಕ ಅನಾವರಣ

0

ಭಾರತೀಯ ಜನತಾ ಪಾರ್ಟಿಯಕಾರ್ಯಕರ್ತರ ಸ್ನೇಹ ಮಿಲನ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿಯು ಸುಳ್ಯದ ಅಂಬಟೆಡ್ಕದಲ್ಲಿ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಪಕ್ಷದ ನೂತನ ಕಾರ್ಯಾಲಯದ ಪರಿಸರಕ್ಕೆ
“ನರೇಂದ್ರ ವಿಹಾರ” ಎಂಬ ನಾಮಕರಣ ಮಾಡಲಾಗಿದ್ದು ಇದರ
ನಾಮಫಲಕ ಅನಾವರಣ ಹಾಗೂ ಬಿಜೆಪಿ ಕಾರ್ಯಕರ್ತರ ಸ್ನೇಹಮಿಲನ ಕಾರ್ಯಕ್ರಮವು ಜು.8 ರಂದು ನಡೆಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಮಾತನಾಡಿ “ಹಿರಿಯರ ಶ್ರಮ ಪಕ್ಷದ ಬೆಳವಣಿಗೆಗೆ ಪೂರಕವಾಗಿದೆ. ಸ್ವಾಮಿ ವಿವೇಕಾನಂದರ ಮತ್ತು ಪ್ರಧಾನಿಯವರ ಹೆಸರನ್ನು ಪಕ್ಷದ ಕಾರ್ಯಾಲಯದ ಪರಿಸರಕ್ಕೆ ಇಟ್ಟಿರುವುದು ಶ್ಲಾಘನೀಯ. ಪಕ್ಷದ ಶಿಸ್ತಿನ ಬಗ್ಗೆ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಒಟ್ಟಾಗಿ ‌ಕೆಲಸ ಮಾಡುವ ಮೂಲಕ ಪಕ್ಷವನ್ನು ಇನ್ನಷ್ಟು ಬೆಳೆಸಲು ಮುಂದಡಿ ಇಡೋಣ ಎಂದು ಕರೆ ನೀಡಿದರು.

ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿ ಬಯಂಬು ಭಾಸ್ಕರ ರಾವ್ ರವರು ಪಕ್ಷ ಬೆಳೆದು ಬಂದ ಹಾದಿಯ ಅವಲೋಕನ ಮಾಡಿದರು. ನರೇಂದ್ರ ವಿಹಾರ ಎಂಬ ಹೆಸರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರು ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಹಿರಿಯರಾದ ಡಾ. ರಾಮಯ್ಯ ಭಟ್, ಪಿ.ಕೆ.ಉಮೇಶ್, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ರಾಧಾಕೃಷ್ಣ ಕೋಟೆ, ಮಧು ಸೂದನ್ ಕುಂಭಕೋಡು, ಶ್ರೀಮತಿ ಲತಾ ಮಧುಸೂದನ್, ಮುಳಿಯ ಕೇಶವ ಭಟ್, ಸುಧಾಕರ ಕಾಮತ್ ವಿನೋಬನಗರ, ಕೃಷ್ಣ ಶೆಟ್ಟಿ ಕಡಬ, ವಿನಯ ಕುಮಾರ್ ಕಂದಡ್ಕ, ಸುಭೋದ್ ರೈ ಮೇನಾಲ, ಪ್ರದೀಪ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ಮಧುಸೂದನ್ ಮತ್ತು ಲತಾ ಮಧುಸೂದನ್ ದಂಪತಿಯನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ಎ.ವಿ.ತೀರ್ಥರಾಮ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು.
ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ಪಕ್ಷದ ಅನನ್ಯ ಜವಬ್ದಾರಿ ವಹಿಸಿಕೊಂಡ ಪದಾಧಿಕಾರಿಗಳು ಮತ್ತು ಸದಸ್ಯರು, ಪಕ್ಷದ ಕಾರ್ಯಕರ್ತರು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.