23-24 ನೇ ಹೊಸ ಕ್ಲಬ್ ಗಳ ಸಾಲಿನಲ್ಲಿ 5 ವರ್ಷದೊಳಗಿನ ಕ್ಲಬ್‌ಗಳಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಮುಲ್ಕಿ ಸುಂದರಾಮ್ ಶೆಟ್ಟಿ ಕನ್ವೆಂನ್ಷನ್ ನಲ್ಲಿ ಜು. 6ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 317 ಡಿ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ ಸೋಜಾರವರಿಂದ ಹಲವಾರು ಪ್ರಶಸ್ತಿಗಳನ್ನು ಪಡೆದರು. ಉತ್ತಮ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಸತೀಶ್ ಕೂಜುಗೋಡು, ಕೋಶಾಧಿಕಾರಿ ಚಂದ್ರಶೇಖರ ಪಾನತ್ತಿಲ, ತೃತೀಯ ಸ್ಥಾನ ಪಡೆದರು. ಹಾಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ವಿಮಲಾ ರಂಗಯ್ಯ ಶೆಟ್ಟಿಗಾರ್, ಹಾಲಿ ಅಧ್ಯಕ್ಷ ರಾಜೇಶ್ ಎನ್.ಎಸ್, ಕಾರ್ಯದರ್ಶಿ ಕೃಷ್ಣ ಕುಮಾರ್ ಬಾಳುಗೋಡು, ಕೋಶಾಧಿಕಾರಿ ಮೋಹನ್ ದಾಸ್ ರೈ, ಲಯನ್ಸ್ ಭಾರತಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.