ಸಂಪಾಜೆ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

0

ಮೂಲಭೂತ ಸೌಲಭ್ಯಗಳ ಕೊರತೆಗಳು ಹಾಗೂ ಮಳೆಗಾಲದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ

ಅಧಿಕಾರಿಗಳ ಗೈರು ಹಾಜರು

ಗ್ರಾಮೀಣ ಪ್ರದೇಶದ ರಸ್ತೆ, ಚರಂಡಿ ದುರಸ್ತಿ, ವಿದ್ಯುತ್ ಕಂಬಗಳ ದುರಸ್ತಿ, ಕುಡಿಯುವ ನೀರು, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವಂತೆ ಹಾಗೂ ಮಳೆಗಾಲದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆದ ಘಟನೆ ಸಂಪಾಜೆ ಗ್ರಾಮಸಭೆಯಿಂದ ವರದಿಯಾಗಿದೆ.

ದ. ಕ ಸಂಪಾಜೆ ಗ್ರಾಮ ಪಂಚಾಯತ್ 2024 -25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜು.8ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ ರಮೇಶ್ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಸಿಬ್ಬಂದಿ ಗೋಪಮ್ಮ ಅವರು ಗ್ರಾಮಸಭೆಯ ವರದಿ ಮತ್ತು ಜಮಾ ಖರ್ಚಿನ ವಿವರ ಮಂಡಿಸಿದರು.

ಗ್ರಾಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ವೋಲ್ಗಾ ಡಿಸೋಜ ಅವರು ಸ್ವಾಗತಿಸಿದರು.

ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಇಲಾಖೆಯ ಸೌಲಭ್ಯ, ಮಳೆಗಾಲದ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮದ ಮೂಲಭೂತ ಸೌಲಭ್ಯಗಳಾದ ಗ್ರಾಮೀಣ ಪ್ರದೇಶದ ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆ , ವಿದ್ಯುತ್ ಕಂಬಗಳ ಸರಿ ಪಡಿಸುವಿಕೆ, ನೀರಿನ ಸಮಸ್ಯೆ, ಚರಂಡಿ ಮೋರಿ ವ್ಯವಸ್ಥೆ, ಅಂಗನವಾಡಿ ಮಕ್ಕಳ ಪೌಸ್ಟಿಕ ಆಹಾರದ ಕೊರತೆ, ಕಾಡಾನೆ ಹಾವಳಿಯಿಂದ ಕೃಷಿ ನಾಶ, ಸೋಲಾರ್ ತಂತಿ ಅಳವಡಿಸಿಕೆ, ಪ್ಲಾಟಿಂಗ್ ಸಮಸ್ಯೆ, ದನಗಳಿಗೆ ಟ್ಯಾಗ್ ಅಳವಡಿಕೆ ಕುರಿತು, ಎಲೆ ಚುಕ್ಕಿ ರೋಗ, ಸ್ವಚ್ಛತೆ, ಪ್ರವಾಹ ಭೀತಿ, ರಸ್ತೆ ಕಾಂಕ್ರಿಟೀಕರಣ ಮೊದಲಾದ ಸಮಸ್ಯೆಗಳ ಮತ್ತು ಕಾಮಗಾರಿಗಳ ಬಗ್ಗೆ ಕುರಿತು ಚರ್ಚಿಸಲಾಯಿತು.

ಜೊತೆಗೆ ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳ ಕುರಿತು ಚರ್ಚಿಸಲಾಯಿತು.

ಕುಡಿಯುವ ನೀರಿನ ಮತ್ತು ನೈರ್ಮಲ್ಯಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಿರ್ಣಯಗಳನ್ನು ತಿಳಿಸಿದರು.

ಸಭೆಯಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸ.ಸಂಘದ ನಿರ್ದೇಶಕ ಪಿ. ಎನ್ ಗಣಪತಿ ಭಟ್ ಮಾತನಾಡಿ ಸಂಪಾಜೆ ಗ್ರಾಮ ವ್ಯಾಪ್ತಿಯ ಶಾರದ ಕಾಲೇಜಿನ ಬಳಿ ವಿದ್ಯುತ್ ಕಂಬ ಮತ್ತು ಲೈನ್ ತಂತಿ ಮುರಿದು ಬೀಳುವ ಪರಿಸ್ಥಿತಿಗೆ ಬಂದಿದೆ. ಇದರಿಂದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೀವಕ್ಕೆ ಹಾನಿಯಾಗುವ ಪರಿಸ್ಥಿತಿ ಎದುರಾಗಿದೆ. ಈ ವಿಷಯಗಳನ್ನು ಮಾನವಿಯ ಮೂಲಕ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಕ್ರಮ ವಹಿಸುವಿದಿಲ್ಲ. ಪಂಚಾಯಿತಿಯಲ್ಲಿ ಇದನ್ನು ಕೂಡ ಸರಿಪಡಿಸಿದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವುದು ಇಲ್ಲದಿದ್ದರೆ ಎಲ್ಲಾ ಜೀವಹಾನಿಯ ಹೊಣೆ ಮೆಸ್ಕಾಂ ಅಧಿಕಾರಿಗಳು ವಹಿಸಬೇಕು ಎಂದು ಹೇಳಿದರು.

ಬಿ. ಎಂ. ಎಸ್ ಅಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಕೇಶವ ಬಂಗ್ಲಗುಡ್ಡೆ ಮಾತನಾಡಿ ಒಂದು ವರ್ಷದ ಬಳಿಕ ರಸ್ತೆಯ ಅಗಲೀಕರಣವಾಗಲಿದ್ದು ಈ ಸಂದರ್ಭದಲ್ಲಿ ನಮಗೆ ರಿಕ್ಷಾ ಚಾಲಕರಿಗೆ ಬಸ್ ನಿಲ್ದಾಣದ ಬಳಿಯೇ ರಿಕ್ಷಾ ನಿಲ್ದಾಣ ನಿರ್ಮಾಣವಾಗಬೇಕು ಎಂದು ಗ್ರಾಮ ಪಂಚಾಯಿತಿಗೆ ತಿಳಿಸಿದರು‌.

ಅಧಿಕಾರಿಗಳ ಗೈರು ಹಾಜರು

ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಒಂದು ವಾರಗಳ ಮುಂಚೆ ಗ್ರಾಮಸಭೆ ಇದೆ ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ತಿಳಿಸಲಾಗಿತ್ತು. ಆದರೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದಿದ್ದು, ಉದ್ಯೋಗ ಖಾತರಿಯ ಮುಖ್ಯಸ್ಥ ಅಧಿಕಾರಿ ಎ.ಡಿ. ಮತ್ತು ಟಿ.ಸಿ. ಸಭೆಗೆ ಗೈರು ಹಾಜರಿಯ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ವಿರೋಧ ವ್ಯಕ್ತ ಪಡಿಸಲಾಗಿತ್ತು.

ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್. ಕೆ ಹನೀಫ್, ಮಾಜಿ ಅಧ್ಯಕ್ಷ ಜಿ. ಕೆ ಹಮೀದ್, ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಜಗದೀಶ್ ರೈ ಸಂಪಾಜೆ, ಶ್ರೀಮತಿ ಸುಂದರಿ ಮುಂಡಡ್ಕ, ಶೌವಾದ್ ಗೂನಡ್ಕ, ಪಿ.ಕೆ. ಅಬುಸಾಲಿ, ಶ್ರೀಮತಿ ಲಿಸ್ಸಿ ಮೊನಾಲಿಸಾ, ಶ್ರೀಮತಿ ವಿಮಲಾ ಪ್ರಸಾದ್, ಶ್ರೀಮತಿ ರಜನಿ ಶರತ್, ಸುಶೀಲಾ, ಅನುಪಮಾ, ತೋಟಗಾರಿಕೆ ಇಲಾಖೆ , ಬಿಸಿಎಂ ಇಲಾಖೆ, ಮೆಸ್ಕಾಂ ಇಲಾಖೆ, ಪಶು ಪಾಲನಾ ಮತ್ತು ಪಶು ವೈದ್ಯ ಇಲಾಖೆ ಅಧಿಕಾರಿ , ತಾಲೂಕು ನಗರ ಪಂಚಾಯತ್ , ಕಂದಾಯ ಇಲಾಖೆ, ಪೊಲೀಸ್ ಇಲಾಖೆ, , ಸಮಾಜ ಕಲ್ಯಾಣ ಇಲಾಖೆ, ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾ. ಪಂ ಉಪಾಧ್ಯಕ್ಷ ಎಸ್. ಕೆ. ಹನೀಫ್ ವಂದಿಸಿದರು.