ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ ಫಲಿತಾಂಶ

0

ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ ಆರನೇ ವರ್ಷದ ಎಂ.ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧೆಗೆ ಬಂದ 27
ಕವಿತೆಗಳಲ್ಲಿ ಮೊದಲ ಮೂರು ಕವಿತೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಪ್ರಥಮ ಕವಿತೆ, ಕಡಲ್ ( ಚಂದ್ರಾವತಿ ಬಡ್ಡಡ್ಕ) ದ್ವಿತೀಯ, ಸಂಸಾರಂತೇಳ್ರೆ ( ಬಿ. ಆರ್. ಜೋಯಪ್ಪ ) ತೃತೀಯ, ನೀರೆ ಇಲ್ಲದೆ ( ಶಿವದೇವಿ ಅವನೀಶ್ಚಂದ್ರ ) ಕವಿತೆಗಳು ಆಯ್ಕೆಯಾಗಿವೆ. ನಂತರದ ಸ್ಥಾನಗಳಲ್ಲಿ ,ನನ್ನವ್ವ ( ವಿಮಲರುಣ ಪಡ್ಡಂಬೈಲು ) ಎಂತ ಸಾವುನ ಕನ್ಸೋ( ಕಾರ್ತಿಕ್ ಪದೇಲ) ಕಾಲ ಬದಲಾವುಟು( ಮಮತ ಪಡ್ಡಂಬೈಲು) , ಬೆಳಿ ಮುಗಿಲುಗ ( ಕಟ್ರತನ ಲಲಿತಾ ಅಯ್ಯಣ್ಣ) , ಹೆತ್ತವ್ವನ ಹೊಟ್ಟೆ ಸಂಕಟ ( ಕೃಪಾ ದೇವರಾಜ್ ) ಹರಿಸೇವೆ ( ಕಣಜಾಲು ಪೂವಯ್ಯ)
ಮಾನ್ಮನೆ ಮಕ್ಕಳ ಅರಮನೆ ( ಚಂದ್ರಿಕಾ ಹೊದ್ದೆಟ್ಟಿ,) ಅಂದ್ ನ ಕಾಲ ( ಅಂಬೆಕಲ್ಲು ಸುಶೀಲ ಕುಶಾಲಪ್ಪ ) ಅಮ್ಮನ ಮೊರೆ ಬೇಡ (ಅನನ್ಯ ಹೆಚ್. ಸುಬ್ರಮಣ್ಯ) , (ಬುಟ್ಟೋಕನ) ಶ್ವೇತ ರಮೇಶ್ , ಇಂದ್ ನ ಬೊದ್ಕು ( ವಿನೋದ್ ಮೂಡಗದ್ದೆ) ಕವಿತೆಗಳು ಮೆಚ್ಚುಗೆ ಪಡೆದುಕೊಂಡಿವೆ. ತೀರ್ಪುಗಾರರಾಗಿ ಪ್ರಸಿದ್ಧ ಲೇಖಕಿ ಶ್ರೀಮತಿ.ಜಯಮ್ಮ ಚೆಟ್ಟಿಮಾಡ ಇವರು ಸಹಕರಿಸಿದರು. ಕವನ ಸ್ಪರ್ಧೆಯ ಪ್ರಥಮ ಸ್ಥಾನದ ಪ್ರಾಯೋಜಕರಾಗಿ ಪಿ.ಜಿ. ಅಂಬೆಕಲ್ಲು ಮತ್ತು ತೃತೀಯ ಬಹುಮಾನವನ್ನು ಶ್ರೀಮತಿ. ಲೀಲಾ ದಾಮೋದರ ನೀಡಿರುತ್ತಾರೆ. ಬಹುಮಾನ ವಿತರಣಾ ಕಾರ್ಯಕ್ರಮ ಜುಲೈ ಹದಿನಾರರಂದು ಬೆಳಗ್ಗೆ ಹತ್ತು ಗಂಟೆಗೆ ಸುಳ್ಯದ ಸಂದ್ಯಾರಶ್ಮಿ ಸಭಾಭವನದಲ್ಲಿ ನಡೆಯುವ ಎಂ. ಜಿ. ಕಾವೇರಮ್ಮ ಇವರ ಸಾಹಿತ್ಯ ಕೃತಿಗಳ ಸಂವಾದ ಕಾರ್ಯಕ್ರಮದಲ್ಲಿ ನಡೆಯುತ್ತದೆ.