ಪಂಜ ಲಯನ್ಸ್ ಕ್ಲಬ್ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.9 ರಂದು ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ನಡೆಯಿತು.
ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು.
ಪದಗ್ರಹಣ ಅಧಿಕಾರಿ ಲಯನ್ಸ್ ಜಿಲ್ಲೆ ಪ್ರಥಮ ಉಪರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಮಾತನಾಡಿ “ಗ್ರಾಮೀಣ ಪ್ರದೇಶದ ಪಂಜ ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡು ಲಯನ್ಸ್ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿದೆ. ಇದೀಗ ನೂತನ ಲಯನ್ಸ್ ಭವನ ನಿರ್ಮಿಸಿ ಸಧೃಡ ಕ್ಲಬ್ ಆಗಿ ಬೆಳೆದಿದೆ.” ಎಂದು ಹೇಳಿದರು.
ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ ಶಶಿಧರ ಪಳಂಗಾಯ ಸಭಾಧ್ಯಕ್ಷತೆ ವಹಿಸಿ ಅವರ ಪತ್ನಿ ಶ್ರೀಮತಿ ರಶ್ಮಿ ಪಳಂಗಾಯ ಜೊತೆಗೆ ದೀಪ ಬೆಳಗಿಸಿದರು.
ವಲಯ ಅಧ್ಯಕ್ಷ ಪ್ರೊ.ಕೆ. ರಂಗಯ್ಯ ಶೆಟ್ಟಿಗಾರ್,ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ಶುಭ ಹಾರೈಸಿದರು.
ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿ ಆನಂದ ಜಳಕದಹೊಳೆ, ನೂತನ ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ, ನೂತನ ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನ ಸದಸ್ಯರಿಗೆ ದೊರೆತ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು.ಉಪರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ರವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ ಉಪಸ್ಥಿತರಿದ್ದರು.
ಸನ್ಮಾನ-ಗೌರವ: ಲಯನ್ಸ್ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ, ದಾನಿ ಪುರುಷೋತ್ತಮ
ಉಷಾ ಮಲ್ಕಜೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಭಾಗೀರಥಿ ತುಕಾರಾಮ ಏನೆಕಲ್ಲು, ಯಕ್ಷಗಾನ ವೈಭವ ಪ್ರಸ್ತುತಿ ಪಡಿಸಿದ ಕು.ರಚನಾ ಚಿದ್ಗಲ್ಲು ರವನ್ನು ಸನ್ಮಾನಿಸಲಾಯಿತು.ಪಂಬೆತ್ತಾಡಿ ಚಿಗುರು ತಂಡದ ಸೇವಾ ಚಟುವಟಿಕೆ ಗುರುತಿಸಿ ರೂಂ.2000 ನಗದು ನೀಡಿ ಗೌರವಿಸಲಾಯಿತು. ಕಂರ್ಬಿಲ ಬೋನಡ್ಕ ವಸಂತ ರತ್ನ ವಿಶೇಷ ಚೇತನರ ಶಾಲೆಗೆ ರೂ.5000 ದೇಣಿಗೆ ಹಾಗೂ ಒಂದು ವರುಷಕ್ಕೆ ಬೇಕಾಗುವ ಅಕ್ಕಿಯನ್ನು ನೀಡುವುದಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಗೌತಮಿ,ನೇಹಾ ಬಾಲಾಡಿಯವರಿಗೆ ತಲಾ ರೂ.2000 ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಕ್ಲಬ್ ನ ಸದಸ್ಯರ ಮನೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು , ಸಾಧಕರನ್ನು ಗುರುತಿಸಲಾಯಿತು.
ಕಾರ್ಯಕ್ರಮದಲ್ಲಿ ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು. ಮೋಹನ್ ದಾಸ್ ಕೂಟಾಜೆ ವಂದಿಸಿದರು.ಪದಗ್ರಹಣ ಸಮಾರಂಭಕ್ಕೆ ಮೊದಲು ಕು.ರಚನಾ ಚಿದ್ಗಲ್ಲು ರವರ ಪ್ರಸ್ತುತಿಯಲ್ಲಿ
ಯಕ್ಷ ಗಾನ ವೈಭವ ಜರುಗಿತು.