ನಿಮ್ಮ ಮನೆಗೂ ಬರಬಹುದು, ಎಚ್ಚರ ಗ್ರಾಹಕರೇ ಆಸೆಗೆ ಬಿದ್ದರೆ ಅಪಾಯ ಖಚಿತ
ಇತ್ತೀಚಿಗೆ ಆನ್ಲೈನ್ ಶಾಪಿಂಗ್ ಕಂಪನಿಗಳ ಹೆಸರಲ್ಲಿ ಜನತೆಗೆ ಆಸೆಯನ್ನು ತೋರಿಸಿ ಅದಕ್ಕೆ ಬಲಿಯಾಗಿ ನೂರಾರು ಮಂದಿ ಲಕ್ಷಗಟ್ಟಲೇ ಹಣವನ್ನು ಕಳೆದು ಕೊಂಡ ಘಟನೆಗಳು ನಡೆದಿದೆ.
ಇದೀಗ ಅದೇ ರೀತಿಯ ಮತ್ತೊಂದು ವಂಚನೆಯ ಜಾಲ ಇದೀಗ ಸದ್ದು ಮಾಡಲು ಆರಂಭಿಸಿದೆ.
ಸುಳ್ಯ ಜಯನಗರದ ಯುವಕ ಕಾರ್ಮಿಕ ಆಶೀಫ್ ಎಂಬಾತನಿಗೆ ಇಂದು ಸ್ವೀಡ್ ಪೋಸ್ಟ್ ಮೂಲಕ ಆನ್ಲೈನ್ ಶಾಪಿಂಗ್ ಕಂಪನಿಯ ಸ್ಕ್ರಾಚ್ ಕಾರ್ಡ್ ಬಂದಿದೆ.ಮೀಶೋ ಕಂಪನಿಯ ಸುಳ್ಳು ಹೆಸರಿನಲ್ಲಿ ಬಂದಿರುವ ಈ ಪೋಸ್ಟ್ ನಲ್ಲಿ ತಾವು ನಮ್ಮ ಕಂಪನಿಯ ಲಕ್ಕಿ ಸದಸ್ಯರಾಗಿದ್ದು ನಿಮಗೆ ನಮ್ಮ ಕಂಪನಿವತಿಯಿಂದ ಸ್ಕ್ರಾಚ್ ಕಾರ್ಡ್ ಕಳುಹಿಸಲಾಗಿದೆ.ಅದರಲ್ಲಿ ನೀವು ನಮ್ಮ ಕಂಪನಿ ವತಿಯಿಂದ ಪ್ರಥಮ ಬಹುಮಾನ 14,51000 ರೂ ದ್ವಿತೀಯ ಬಹುಮಾನ ಆಲ್ಟೊ ಕಾರು, ಮೂರನೇ ಬಹುಮಾನ ಸ್ಕೂಟಿ ವಾಹನ ಅಲ್ಲದೇ ಇತರ 17 ಬೇರೆ ಆಕರ್ಷಕ ಬಹುಮಾನ ಪಡೆಯಲು ಅರ್ಹರಾಗಿದ್ದು ಸ್ಕ್ರಾಚ್ ಮಾಡಿದ ಬಳಿಕ ತಮ್ಮ ಆಧಾರ್ ಸಂಖ್ಯೆ,ಅಥವಾ ಸರಕಾರದ ಯಾವುದಾದರೂ ಒಂದು ಐ ಡಿ ಪುರಾವೆಗಳನ್ನು ಕಳುಹಿಸಿ ಎಂದು ಉಲ್ಲೇಖಿಸಲಾಗಿದೆ.
ಮತ್ತು ಕಂಪನಿಯ ವ್ಯವಸ್ತಾಪಕರ ಹೆಸರು ಹಾಗೂ ಫೋನ್ ನಂ ನೀಡಲಾಗಿದೆ.
ಇದನ್ನು ನೋಡಿದ ಯುವಕ ಸುಳ್ಯದಲ್ಲಿ ಕಾರ್ಯಚರಿಸುವ ಮೀಶೋ ಇದರ ಕಚೇರಿಗೆ ಹೋಗಿ ವಿಚಾರಿಸಿದಾಗ ಇದನ್ನು ನಂಬಬೇಡಿ.ಇದು ಫೇಕ್ ಆಗಿದ್ದು ನೀವು ಮುಂದುವರಿದರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಮೋಸ ಹೋಗುತ್ತೆ ಎಂದು ತಿಳಿಸಿದ್ದಾರೆ.ಬಳಿಕ ಇದರಲ್ಲಿ ವಂಚನೆಯ ಉದ್ದೇಶವಿದೆ ಎಂದು ಅರಿತ ಯುವಕ ಅದರಲ್ಲಿ ನೀಡಿದ ವ್ಯಕ್ತಿಗೆ ದೂರವಾಣಿ ಕರೆ ಮಾಡಿದ್ದು ಆದರೆ ಆ ನಂಬರಿನಲ್ಲಿ ಯಾವುದೇ ಕರೆಯನ್ನು ಸ್ವೀಕರಿಸದೆ ಇದ್ದಾಗ ಇದು ಮೋಸದ ಆಟವೆಂದು ಅವರಿಗೆ ತಿಳಿದು ಬಂದಿದ್ದು ಸುದ್ದಿಗೆ ಮಾಹಿತಿ ನೀಡಿದ್ದಾರೆ.
ಈ ರೀತಿಯ ಮೋಸ ನಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯೋ ಕೂಡ ವೈರಲ್ಗೊಂಡಿದ್ದು ಸಾರ್ವಜನಿಕರು ಇಂತಹ ಯಾವುದೇ ಸ್ಕ್ರಾಚ್ ಕಾರ್ಡ್ ಗಳು ತಮ್ಮ ಬಳಿ ಬಂದರೆ ಎಚ್ಚರದಿಂದ ಇದ್ದು ಜಾಗರೂಕರಾಗಿರ ಬೇಕಾಗಿದೆ.