ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

0

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2024-2025 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಮೂಲಕ ರಚಿಸಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೊ.PP.PHF ಪ್ರಭಾಕರನ್ ನಾಯರ್ ವಹಿಸಿದರು.ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಯೋಗಿತ ಗೋಪಿನಾಥ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಚುನಾವಣಾಧಿಕಾರಿಗಳಾದ ಶ್ರೀಮತಿ ಜಯಶ್ರೀ. ಕೆ, ಶ್ರೀಮತಿ ಸಂಜೀವಿ.ಪಿ.ಆರ್ , ಪ್ರಾಂಶುಪಾಲರಾದ ಶೋಭ ಬೊಮ್ಮೆಟ್ಟಿ , ಕಳೆದ ಸಾಲಿನ ಶಾಲಾ ನಾಯಕ ಸಮೃದ್ಧ್ ,ಪ್ರಸಕ್ತ ಸಾಲಿನ ರಾಜ್ಯಪಾಲ ಮನ್ವಿತ್ ಎ.ವೈ ,ಶಾಲಾ ನಾಯಕ ಕ್ಷಿತೀಶರಾಮ, ಉಪನಾಯಕ ಸಂಭ್ರಮ್ ಕೆ.ಎಸ್ ,ಸಭಾಪತಿ ಪ್ರಜ್ವಲ್ ಕೆ.ವಿ, ಶಿಕ್ಷಣ ಮಂತ್ರಿ ವೇದಾಂತ್ ಕೆ.ಎಸ್,ಆಹಾರ ಮಂತ್ರಿ ಪ್ರೇರಣಾ ಶೆಟ್ಟಿ ಎಮ್, ಸಾಹಿತ್ಯ ಮತ್ತು ಸಂಸ್ಕೃತಿ ಮಂತ್ರಿ ಸಿಂಚನಾ.ಕೆ.ಎಸ್, ಕ್ರೀಡಾ ಮಂತ್ರಿ ಭವಿಷ್ .ಎಸ್.ಬಿ, ಗೃಹ ಮಂತ್ರಿ ವಂಶಿಕಾ.ಎಸ್, ನೀರಾವರಿ ಮಂತ್ರಿ ಪೃಥ್ವಿರಾಜ್.ಕೆ.ಆರ್, ಆರೋಗ್ಯ ಮತ್ತು ಸ್ವಚ್ಛತೆ ಮಂತ್ರಿ ನಮನ್.ಹೆಚ್, ಸಾರಿಗೆ ಮಂತ್ರಿ ಯಶಸ್ವಿ.ಕೆ.ಜಿ. ಪ್ರತಿಜ್ಞಾ ವಿಧಿ ಸ್ವೀಕರಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ಜಯಶ್ರೀ .ಕೆ ಸ್ವಾಗತಿಸಿ, ಶ್ರೀಮತಿ ಸಂಜೀವಿ ಪಿ.ಆರ್ ವಂದಿಸಿದರು .

ಪೂರ್ವಿಕ,ವಂದಿತಾ,ಗಾನವಿ ಪ್ರಾರ್ಥಿಸಿದರು.ರಮ್ಯಾ.ಅಡ್ಕಾರು ನಿರೂಪಿಸಿದರು.