ಅಡ್ಕಾರು: ಶಾಲಾ ವಿದ್ಯಾರ್ಥಿನಿಗೆ ಬೈಕ್ ಢಿಕ್ಕಿ ಗಾಯ – ಆಸ್ಪತ್ರೆಗೆ ರವಾನೆ

0

ರಸ್ತೆ ದಾಟುತ್ತಿದ್ದ ಶಾಲಾ ವಿದ್ಯಾರ್ಥಿಗೆ ಬೈಕ್ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಗಾಯಗೊಂಡಿದ್ದು, ಸ್ಥಳೀಯರು ಸೇರಿ ವಿದ್ಯಾರ್ಥಿಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದ ಘಟನೆ ಜು.12ರಂದು ಸಂಜೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸಂಭವಿಸಿದೆ.

ಜಾಲ್ಸೂರು ಅಡ್ಕಾರು ಶಾಲಾ ವಿದ್ಯಾರ್ಥಿನಿ ಸಂಜೆ ಶಾಲೆ ಬಿಟ್ಟು ಮುಖ್ಯರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.