ಹಾಕಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ಚಾಂಪಿಯನ್ : ಕರ್ನಾಟಕ ತಂಡದಲ್ಲಿದ್ದ ವಿಶ್ವಜಿತ್ ಕೆ.ವಿ.

0

ಆಂಧ್ರಪ್ರದೇಶದ ಕಡಪದಲ್ಲಿ ನಡೆದ ಎರಡನೇ ಹಾಕಿ ಇಂಡಿಯಾ ಜೂನಿಯರ್ ಮೆನ್ಸ್ ಸೌತ್ ಜೋನ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ತಮಿಳುನಾಡು ತಂಡದ ವಿರುದ್ಧ 4 – 2 ಗೋಲುಗಳಿಂದ ಫೈನಲ್ ಪಂದ್ಯಾಟದಲ್ಲಿ ಜಯಗಳಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.


ಕರ್ನಾಟಕ ತಂಡದಲ್ಲಿದ್ದ ವಿಶ್ವಜಿತ್ ಕೆ.ವಿ.ಯವರು ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮ ಕುಂಭನಗೌಡನ ಮನೆ ವಿನೋದ್ ಕುಮಾರ್ ಮತ್ತು ಶ್ರೀಮತಿ ಜಲಜಾಕ್ಷಿ ಅಡ್ಪಂಗಾಯ ದಂಪತಿ ಪುತ್ರರಾಗಿದ್ದು ಅಜ್ಜಾವರ ಗ್ರಾಮದ ಅಡ್ಪಂಗಾಯ ದಿ.ಸಣ್ಣಯ್ಯ ಗೌಡ ಮತ್ತು ದಿ.ರಾಮಕ್ಕ ರವರ ಮೊಮ್ಮಗ.