ಜಯನಗರ: ಶೌಚಾಲಯದ ಗುಂಡಿ ಜರಿದು ಮನೆಯ ಗೋಡೆ ಕುಸಿತ

0

ಭಾರೀ ಮಳೆ ಕಾರಣ ಮನೆಯ ಶೌಚಾಲಯದ ಗುಂಡಿ ಜರಿದು ಮನೆಯ ಹಿಂಬದಿಯ ಗೋಡೆ ಕುಸಿತ ಉಂಟಾಗಿರುವ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.

ಸುಳ್ಯ ಜಯನಗರ ಕೊರಂಬಡ್ಕದ ಸುನಿತಾ ಎಂಬವರ ಮನೆಯ ಹಿಂಬದಿಯ ಗೋಡೆ ಭಾರಿ ಮಳೆಯಿಂದಾಗಿ ಕುಸಿತಗೊಂಡಿತು.


ಘಟನೆಯಿಂದ ಮನೆಯ ಅಡಿಗೆ ಕೋಣೆ ಮತ್ತು ಶೌಚಾಲಯದ ಗೋಡೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.