ಅಮರಮುಡ್ನೂರು:ಚಾಮಡ್ಕ ಬಳಿ ಹೆಚ್.ಟಿ.ಲೈನ್ ಮೇಲೆ ಬೀಳುವ ಸ್ಥಿತಿಯಲ್ಲಿದೆ ಅಪಾಯಕಾರಿ ಮರ

0

ಅನಾಹುತ ಸಂಭವಿಸುವ ಮೊದಲು ಇಲಾಖೆ ಗಮನಹರಿಸುವಂತೆ ಸ್ಥಳೀಯರ‌ ಆಗ್ರಹ

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಮಡ್ಕ ಎಂಬಲ್ಲಿ ಹೊಳೆಯಲ್ಲಿ ಇರುವ ಮರವೊಂದು ಇಂದೋ ನಾಳೆಯೋ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ‌.


ಹೊಳೆಗೆ ರಸ್ತೆ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ಮರದ ಬುಡ ಭಾಗದಲ್ಲಿ ಗುಂಡಿ ಮಾಡಿ ಮಣ್ಣನ್ನು ತೆಗೆಯಲಾಗಿದೆ. ಇದೀಗ ವಿಪರೀತ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಹರಿವುಹೆಚ್ಚಾಗಿದ್ದು ಮರದ ಬುಡ ಭಾಗದಲ್ಲಿ ಇರುವ ಮಣ್ಣನ್ನು ನೀರು ಕೊಚ್ಚಿಕೊಂಡು ಹೋಗಿರುವುದರಿಂದ ಮರಕ್ಕೆಆಧಾರವಿಲ್ಲದಂತಾಗಿದೆ. ಒಂದು ವೇಳೆ ಮರ ಧರಶಾಯಿಯಾದಲ್ಲಿ ಪಕ್ಕದಲ್ಲಿ ಹೆಚ್.ಟಿ.ವಿದ್ಯುತ್ ಲೈನ್ ಮೇಲೆ ಬೀಳುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದಾಗಿ 2 ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಕಂಬಗಳು ಮುರಿದು ಬೀಳಬಹುದು. ಅಲ್ಲದೆ ಪಕ್ಕದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಅಪಾಯಕ್ಕೀಡಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.


ಘಟನೆ ಸಂಭವಿಸುವ ಮುಂಚಿತವಾಗಿ ಸಂಬಂಧ ಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಶೀಘ್ರವಾಗಿ ಮರ ತೆರವು ಕಾರ್ಯ ಕೈಗೊಂಡರೆ ಮುಂದಾಗುವ ಅನಾಹುತ ವನ್ನು ತಪ್ಪಿಸಬಹುದು ಎಂಬುದು ಸ್ಥಳೀಯ ನಾಗರಿಕರ ಕಾಳಜಿಯಾಗಿದೆ.