ಮಳೆ ನೀರು ಅಡಿಕೆ ತೋಟಕ್ಕೆ ಹರಿದು ಕೃಷಿ ನಾಶ : ಜಿಲ್ಲಾಧಿಕಾರಿಗೆ ದೂರು

0

ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಮಳೆ ನೀರು ಹರಿದು ಬಂದು ತೋಟದಲ್ಲಿ ಶೇಖರಣೆಗೊಂಡು ಕೃಷಿ ನಾಶವಾಗುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ರೈತರೊಬ್ಬರು ದ.ಕ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.


ಅಜ್ಜಾವರ ಗ್ರಾಮದ ಅಡ್ಪಂಗಾಯ ಎ.ಬಿ ಜನರ್ದಾನ ಗೌಡ ಎಂಬವರು ಸುಳ್ಯದಿಂದ ಮಂಡೆಕೋಲು ಗ್ರಾಮಕ್ಕೆ ಹೋಗುವ ಅಜ್ಜಾವರದ ಮಾರ್ಗದ ಬದಿಯ ಚರಂಡಿಯ ಹೂಳನ್ನು ತೆಗೆಯದ ಮತ್ತು ಅವೈಜ್ಚಾನಿಕ ಕಾಮಗಾರಿಯ ಕಾರಣ ಮಳೆ ನೀರು ಚರಂಡಿಯಲ್ಲಿ ಹೋಗದೆ ಅಡಿಕೆ ಕೃಷಿ ತೋಟಕ್ಕೆ ಹರಿದು ಬರುತ್ತಿರುವುದರಿಂದ ಕೃಷಿ ನಾಶವಾಗುತ್ತಿದೆ. ಇದನ್ನು ಕೂಡಲೇ ಪರಿಶೀಲಿಸಿ ಸರಿಪಡಿಸುವಂತೆ ಅವರು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಜಿಲ್ಲಾಧಿಕಾರಿ, ಎ.ಸಿ, ತಹಶೀಲ್ದಾರ್, ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗದಿದಲ್ಲಿ ರೈತ ಸಂಘದ ಸಹಕಾರದೊಂದಿಗೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.