ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ವಿ. ಭಟ್ಟರ ಪತ್ನಿ ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ ವಿ. ಭಟ್ ಮಲ್ಲೆಟ್ಟಿ ಅನಾರೋಗ್ಯದಿಂದ ಇಂದು (ಜು. 20) ಮುಂಜಾನೆ ಮೂಡಬಿದ್ರೆ ಬಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 66 ವರ್ಷ ವಯಸ್ಸಾಗಿತ್ತು.
ಎ.ವಿ. ಭಟ್ಟರು ಸುಬ್ರಹ್ಮಣ್ಯದ ಮಹಿಳಾ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಲ್ಪ ಕಾಲ ಸೇವೆ ಸಲ್ಲಿಸಿದ ಬಳಿಕ ಪಂಬೆತ್ತಾಡಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆಗೆ ನಿಯುಕ್ತಿಗೊಂಡ ನಂತರ ಶ್ರೀಮತಿ ಗೀತಾ ವಿ. ಭಟ್ 1987 ರಿಂದ 1989ರ ತನಕ ಸುಮಾರು 1.5 ವರ್ಷಗಳ ಅವಧಿಗೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತಿ ಎ.ವಿ. ಭಟ್, ಪುತ್ರ ಆಳ್ವಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ.ಸುಕೇಶ್, ಪುತ್ರಿ ಪೂನಾದಲ್ಲಿ ನೆಲೆಸಿರುವ ಶ್ರೀಮತಿ ಮಲ್ಲಿಕಾ ಶ್ಯಾಮ್ ಸುಂದರ್ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.