ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯಸಕ್ರಿಯ ಸದಸ್ಯರಾದ ಪ್ರದ್ಯುಮ್ನ ಅವರ ಕೃಷಿ ಸ್ಥಳದಲ್ಲಿ ಕೆಲಸಗಾರರಾಗಿದ್ದ ದಿ| ಯೋಗೀಶ್ ಪಿ ಅವರ ಆಕಸ್ಮಿಕ ಮರಣ ಪರಿಹಾರವಾಗಿ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜು 20 ರಂದು ದಿ|ಯೋಗೀಶ್ ಪಿ ರವರ ತಾಯಿ ಮೀನಾಕ್ಷಿ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು “ಕ್ಯಾಂಪ್ಕೊ ಸಕ್ರಿಯ ಸದಸ್ಯರ ಮನೆಯ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಆಕಸ್ಮಿಕ ಮರಣ ಹೊಂದಿದ ಸಂದರ್ಭ ಆ ಕುಟುಂಬಕ್ಕೆ ಸಂಸ್ಥೆ ವತಿಯಿಂದ ರೂ.50 ಸಾವಿರ ಸಹಾಯಧನ ಕೊಡಲಾಗುತ್ತದೆ. ಇದೀಗ ಸುಳ್ಯ ತಾಲೂಕಿನಲ್ಲಿ ಪ್ರಥಮವಾಗಿ ಈ ಸಹಾಯಧನವನ್ನು ವಿತರಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸಹ ಸಂಘಚಾಲಕರಾದ ಪ್ರದ್ಯುಮ್ನ ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಧರ , ಸುಳ್ಯ ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾರಾಯಣ ಯಸ್ ಎಂ, ಅವಿನ್ ಕುಮಾರ್ ಪಿ ಆರ್‌ಎಸ್‌ಎಸ್ ಐವರ್ನಾಡು ಮಂಡಲ ಪ್ರಮುಖ್ ಅವಿನ್ ಕುಮಾರ್, ಚಂದ್ರಶೇಖರ ನೇಡಿಲು ,ಹಿರಿಯ ಬಿಜೆಪಿ ಕಾರ್ಯಕರ್ತ ಕೆ ಕೆ ಬಾಲಕೃಷ್ಣ , ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ರೈ ಉಬರಡ್ಕ, ರಾಜೇಶ್ ರೈ ಜಟ್ಟಿಪಳ್ಳ, ಪ್ರಕಾಶ್ ಕುಮಾರ್ ಶೆಟ್ಟಿ ಸೀನಿಯರ್ ಮ್ಯಾನೇಜರ್ ಕ್ಯಾಂಪ್ಕೋ ಪ್ರಾದೇಶಿಕ ಕಚೇರಿ, ಪುತ್ತೂರು ಇದರ ಸೀನಿಯರ್ ಮ್ಯಾನೇಜರ್ ಪ್ರಕಾಶ್ ಕುಮಾರ್ ಶೆಟ್ಟಿ ,ಕ್ಯಾಂಪ್ಕೋ ಸುಳ್ಯ ಶಾಖೆಯ ಪ್ರಬಂಧಕರಾದ ವಿನೋದ್ ಕುಮಾರ್ ಎ, ಸಂತೋಷ್ ಪಿ, ಸೀನಿಯರ್ ಮ್ಯಾನೇಜರ್ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.