ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಬದಲಿಸಿದ ವಿದ್ಯುತ್ ಕಂಬದಲ್ಲಿ ಇನ್ನೂ ಅಳವಡಿಸದ ಬೀದಿದೀಪಗಳು
ಸುಳ್ಯದ ಪೈಚಾರು ಪೇಟೆಯಲ್ಲಿ ವಿದ್ಯುತ್ ಕಂಬಗಳಲ್ಲಿ ಬೀದಿ ದೀಪಗಳಿಲ್ಲದೆ ರಾತ್ರಿ ಸಮಯ ಕತ್ತಲಮಯವಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಈ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಯ ವೇಳೆ ರಸ್ತೆ ಬದಿಯಲ್ಲಿದ್ದ ಬೀದಿ ದೀಪದ ಕಂಬಗಳನ್ನು ತೆರುವುಗೊಳಿಸಲಾಗಿತ್ತು.
ಕಾಮಗಾರಿಯ ವೇಳೆ ಅಲ್ಲಿಂದ ತೆರವು ಗೊಳಿಸಿದ್ದ ಕಟ್ಟಡಗಳು ಪುನರ್ ನಿರ್ಮಾಣ ಗೊಂಡು ಅಂಗಡಿ ಮಳಿಗೆಗಳಲ್ಲಿ ವ್ಯಪಾರ ಚಟುವಟಿಕೆಗಳು ಆರಂಭಗೊಂಡು ಒಂದು ತಿಂಗಳು ಕಳೆದಿದ್ದು,ಪರಿಸರದ ವಿದ್ಯುತ್ ಕಂಬಗಳಲ್ಲಿ ಬೀದಿ ದೀಪ ಮಾತ್ರ ಇನ್ನೂ ಕೂಡ ಅಳವಡಿಸಿಲ್ಲ.
ಆದ್ದರಿಂದ ರಾತ್ರಿ ವೇಳೆ ಪರಿಸರ ಕತ್ತಲುಮಯವಾಗಿದೆ. ಅಲ್ಲದೆ ಮಳೆಗಾಲದ ಕಾರಣ ರಸ್ತೆಯಲ್ಲಿ ಬೆಳಕು ಇಲ್ಲದೆ ಅಪಘಾತ ಸಂಭವಿಸುವ ಸನ್ನಿವೇಶವೂ ಉಂಟಾಗಬಹುದು.
ಈ ಬಗ್ಗೆ ಸುಳ್ಯ ಮೆಸ್ಕಾಂ ಅಧಿಕಾರಿಗಳಲ್ಲಿ ಕೇಳಿದಾಗ ರಸ್ತೆ ನಿರ್ಮಾಣ ಮಾಡಿದ ಇಲಾಖೆಯವರೇ ಇದನ್ನು ಸರಿಪಡಿಸಬೇಕಾಗಿದೆ ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಂಬಂದಪಟ್ಟವರು ಆದಷ್ಟು ಶೀಘ್ರದಲ್ಲಿ ಈ ಭಾಗದಲ್ಲಿ ದಾರಿ ದೀಪ ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.