ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಯಾದವ ಸಭಾ ಪ್ರಾದೇಶಿಕ ಸಮಿತಿ ವತಿಯಿಂದ ಸಮುದಾಯಭವನವು ಜು.14ರಂದು ಉದ್ಘಾಟನೆಗೊಂಡಿತು.
ನರಸಿಂಹ ಭಟ್ ಕಲ್ಲುಗುಂಡಿ ಅವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಿತು. ಈ ಸಂದರ್ಭದಲ್ಲಿ ಸಂಪಾಜೆ ಯಾದವ ಸಭಾ ಪ್ರಾದೇಶಿಕ ಸಮಿತಿ ಅಧ್ಯಕ್ಷ ನಾರಾಯಣ ಬಾಲಂಬಿ, ಮಾಜಿ ಅಧ್ಯಕ್ಷ ಕೃಷ್ಣ ಮಣಿಯಾಣಿ ಕೈಪಡ್ಕ, ಕುಂಞಿಕಣ್ಣ ಕೈಪಡ್ಕ, ಕುಂಞಿರಾಮ ಮಣಿಯಾಣಿ ಕೀಲಾರು, ಶ್ರೀಮತಿ ಸಾವಿತ್ರಿ ದೊಡ್ಡಡ್ಕ, ಉಪಾಧ್ಯಕ್ಷೆ ಶ್ರೀಮತಿ ಆಶಾ ಗೂನಡ್ಕ, ಕಾರ್ಯದರ್ಶಿ ಚಂದ್ರನ್ ಕಡಪಾಲ ಸೇರಿದಂತೆ ಸಂಪಾಜೆ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಯಾದವ ಸಮುದಾಯ ಬಾಂಧವರು ಉಪಸ್ಥಿತರಿದ್ದರು.