ಪಂಜ:ಬಿ.ಎಂ.ಎಸ್ ಸ್ಥಾಪನ ದಿನಾಚರಣೆ

0

70 ನೇ ವರ್ಷದ ಬಿ.ಎಂ.ಎಸ್ ಸ್ಥಾಪನ ದಿನಾಚರಣೆಯನ್ನು ಜು.23 ರಂದು ಪಂಜ ಸಂಪ್ರೀತಿ ಆಟೋ ನಿಲ್ದಾಣದಲ್ಲಿ ಆಚರಿಸಲಾಯಿತು .

ಪಂಜ ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಸಂಪ್ಯಾಡಿ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಮತ್ತು ಲಯನ್ಸ್ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ಹಾಗೂ ಪ್ರಗತಿಪರ ಕೃಷಿಕ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ , ಪಂಜ ಬಿ.ಎಂ.ಎಸ್ ಆಟೋ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ದೇವಪ್ಪ ಹೆಚ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಶೇಖರ ದೇರಾಜೆ ಸ್ವಾಗತಿಸಿದರು . ಶಶಿದಾಸ್ ನಾಗತೀರ್ಥ ವಂದಿಸಿದರು.