ಕೆ.ವಿ.ಜಿ ಇಂಜಿನಿಯರಿಂಗ್‌ ಕಾಲೇಜಿನ 1992 ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಪುನರ್‌ಮಿಲನ

0

ಕೆ.ವಿ.ಜಿ. ಇಂಜಿನಿಯರಿಂಗ್‌ ಕಾಲೇಜಿಗೆ 1992 ರಲ್ಲಿ ದಾಖಲಾದ ವಿದ್ಯಾರ್ಥಿಗಳ 32ನೇ ವರ್ಷದ ಪುನರ್ಮಿಲನ ಸಮ್ಮೇಳನವು ಜುಲೈ೨೦ರಂದು ಕೋರಮಂಗಲ ಕ್ಲಬ್, ಕೋರಮಂಗಲ, ಬೆಂಗಳೂರು ಇಲ್ಲಿ ವಿಜೃಂಬಣೆಯಿಂದ ನಡೆಯಿತು.



ಈ ಸಮಾರಂಭಕ್ಕೆಯು.ಎ.ಇ.,ಯು.ಎಸ್.ಎ ಮತ್ತು ಇತರ ದೇಶಗಳಿಂದ ಹಳೆವಿದ್ಯಾರ್ಥಿಗಳು ಆಗಮಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ.ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಬ್ಯಾಚ್‌ನ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳನ್ನು ಸ್ಮರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಈ ಬ್ಯಾಚ್‌ನ ವಿದ್ಯಾರ್ಥಿಗಳ ಕಳೆದ ವರ್ಷದುಬೈಯಲ್ಲಿ ನಡೆದ ಸಮ್ಮಿಲನ ಕಾರ್ಯಕ್ರಮ ಪ್ರಯುಕ್ತ ಕಾಲೇಜಿಗೆ SMART CLASS ROOM ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿ ಪ್ರಶಂಶಿಸಿದರು.

ಕಾಲೇಜಿನ ಮಾಜಿ ಪ್ರಾಧ್ಯಾಪಕರಾದ ಪ್ರೊ. ನಂದಾ ಹೆಚ್.ಎಸ್. ಪ್ರಾಂಶುಪಾಲರು ಬಿ.ಟಿ.ಐ., ಬೆಂಗಳೂರು, ಪ್ರೊ. ರವಿಕಿರಣ್, ಪ್ರಾಧ್ಯಾಪಕರುಎಸ್.ಎಸ್.ಐ.ಟಿ. ತುಮಕೂರು, ಶ್ರೀ ವಾಸುಕಿ ನಾಗರಾಜ್, ಮಾಜಿ ವೃತ್ತಿಪರ ಸಾಫ್ಟ್‌ವೇರ್‌ಉದ್ಯೋಗಿ, ಶ್ರೀ ಶಂಕರ್‌ಕಾರಂತ್, ಉದ್ಯೋಗಿಟೆಕ್ಸಾಸ್‌ಇನ್‌ಸ್ಟ್ರುಮೆಂಟ್ಸ್, ಬೆಂಗಳೂರು, ಶ್ರೀಮತಿ ರೇಖಾ ನಂದ, ಶ್ರೀಮತಿ ಅನಿತಾ ಶರತ್, ಸಲಹೆಗಾರರು, ಸಮಾಧಾನ್ ಸಂಸ್ಥೆ ಹಾಗೂ ಶ್ರೀ ಸುದರ್ಶನ್ ಹಾಗೂ ಹಳೆ ವಿದ್ಯಾರ್ಥಿಗಳಾದ ಭಾರತದಿಂದ ವಾಣಿಜ್ಯೋದ್ಯಮಿ ಶ್ರೀ ವೆಂಕಟೇಶ್‌ಎಂ.ಎಸ್. ಮತ್ತುದಯಾನಂದ ಸಾಗರಯುನಿವರ್ಸಿಟಿಯ ಪ್ರಾಧ್ಯಾಪಕಿ ಶ್ರೀಮತಿ ಜಯವೃಂದ ಹಾಗೂ ಯು.ಎ.ಇ.ಯಿಂದ ಉದ್ಯಮಿಗಳಾದ ಶ್ರೀ ರಿಜುಮೋನ್ ಮತ್ತು ಶ್ರೀ ಗೋಕುಲ್‌ನಾಥ್‌ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯೋದ್ಯಮಿ ಶ್ರೀ ವೆಂಕಟೇಶ್‌ಎಂ.ಎಸ್. ಗಣ್ಯರನ್ನು ಹಾಗೂ ಸಭಿಕರನ್ನುಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಹಳೆವಿದ್ಯಾರ್ಥಿಗಳಾದ ಶ್ರೀಮತಿ ಜಯವೃಂದ ಹಾಗೂ ಶ್ರೀ ಜಾನ್ಸನ್‌ಜೋಸ್, ಡೈರೆಕ್ಟರ್‌ Google India ಹಾಗೂ ರಾಘವೇಂದ್ರಕೋಟೆಗಾರ್, ಆಪರೇಶನ್ಸ್ ಹೆಡ್, ಏರೋಸ್ಪೇಸ್ ಕಂಪೆನಿ, ಕಾಲೇಜಿನ ಮಾಜಿ ಪ್ರಾಧ್ಯಾಪಕರನ್ನು ಗುರುತಿಸಿ ಗೌರವಿಸಿದರು.

ಕಾಲೇಜಿನ ಹಳೆ ವಿದ್ಯಾರ್ಥಿಗಳಲ್ಲೋರ್ವರಾದ ಭಾರತೀಯ ಸೇನೆಯ ಬ್ರಿಗೇಡಿಯರ್ ವಿಶ್ವನಾಥ್ ಸಿಂಗ್ ಇವರನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನುದುಬೈ ನಿವಾಸಿಯಾದ ಡಾ. ಅಪರ್ಣಾಇವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಫನ್‌ಗೇಮ್ಸ್ ಮತ್ತುಡಿ.ಜೆ. ಯನ್ನುಆಯೋಜಿಸಲಾಗಿತ್ತು. ಸುಮಾರು೧೫೦ ವಿದ್ಯಾರ್ಥಿಗಳು ತಮ್ಮಕುಟುಂಬದವರೊಂದಿಗೆ ಭಾಗವಹಿಸಿದ್ದರು.