ರಾಷ್ಟ್ರೀಯ ಶಿಕ್ಷಣ ನೀತಿ(NEP)ಒಂದುದೇಶದ ಶಿಕ್ಷಣ ವ್ಯವಸ್ಥೆಯಅಭಿವೃದ್ಧಿಗೆ ಸಾರ್ವತ್ರಿಕವಾಗಿ ಹರಡುವ ನೀತಿಕಾರ್ಯಕ್ರಮ :ಡಾ. ಉಜ್ವಲ್‌ಯು.ಜೆ
ಕೆ.ವಿ.ಜಿ. ಇಂಜಿನಿಯರಿಂಗ್‌ಕಾಲೇಜಿನಲ್ಲಿತೃತೀಯವರ್ಷದ ವಿದ್ಯಾರ್ಥಿಗಳಿಂದ 2024ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, ಮಿನಿ ಪ್ರಾಜೆಕ್ಟ್‌ಎಕ್ಸ್‌ಪೋ -2024 ಜು.23 ರಂದು ನಡೆಯಿತು.
ಪ್ರದರ್ಶನದ ಉದ್ಘಾಟನೆಯನ್ನು ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್&ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರುಡಾ. ಉಜ್ವಲ್‌ಯು.ಜೆ.ಯವರು ಉದ್ಘಾಟಿಸಿ ರಾಷ್ಟ್ರೀಯ ಶಿಕ್ಷಣ ನೀತಿ(NEP) ಒಂದುದೇಶದ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಸಾರ್ವತ್ರಿಕವಾಗಿ ಹರಡುವ ನೀತಿಕಾರ್ಯಕ್ರಮ, ಇದಕ್ಕೆ ಈ ಮಿನಿ ಪ್ರಾಜೆಕ್ಟ್‌ಎಕ್ಸ್‌ಪೋ ಪೂರಕವಾಗಿದೆಎಂದು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿವಿಧ ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರಾಜೆಕ್ಟ್‌ಗಳು ಪ್ರದರ್ಶಿತಗೊಂಡಿದ್ದು, ವಿದ್ಯಾರ್ಥಿಗಳ ಆಸಕ್ತಿ, ಶ್ರಮ ಮತ್ತು ಸೃಜನಶೀಲತೆಗೆ ಮತ್ತು ಬೋಧಕ ವೃಂದದಿಂದ ನೀಡಲ್ಪಟ್ಟ ಸೂಕ್ತ ಮಾರ್ಗದರ್ಶನಕ್ಕೆ ಪ್ರಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿ ಸಾಂದರ್ಭಿಕ ಮಾತುಗಳನ್ನಾಡಿದರು. ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ಕಾರ್ಯಕ್ರಮ ಸಂಯೋಜಕರು ಪ್ರೊ. ರಾಘವೇಂದ್ರ ಆರ್. ಕಾಮತ್ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಕು. ದೇಚಮ್ಮ ಮತ್ತು ಶ್ರೀ ರಕ್ಷಿತ್ ನಡೆಸಿಕೊಟ್ಟರು. ಮಿನಿ ಪ್ರಾಜೆಕ್ಟ್‌ಎಕ್ಸ್‌ಪೋ-2024 ಪ್ರಾಜೆಕ್ಟ್ ವೀಕ್ಷಣೆಗೆಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜು ಮತ್ತು ಕೆ.ವಿ.ಜಿ. ಪಾಲಿಟೆಕ್ನಿಕ್ ಮತ್ತು ಕೆ.ವಿ.ಜಿ. ಐ.ಪಿ.ಎಸ್.ನಿಂದ ಹಲವಾರು ವಿದ್ಯಾರ್ಥಿಗಳು ಆಗಮಿಸಿದರು. ಕಾಲೇಜಿನ ಎಲ್ಲಾಇಂಜಿನಿಯರಿಂಗ್ ವಿಭಾಗಗಳಿಂದ ಪ್ರಾಜೆಕ್ಟ್‌ಗಳು ಪ್ರದರ್ಶಿತಗೊಂಡವು.ಇದೇ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಮತ್ತು ಗಣಿತ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ., ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ.ಉಮಾಶಂಕರ್‌ಕೆ.ಎಸ್., ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರುಡಾ. ಚಂದ್ರಶೇಖರ್ ಎ., ವಿದ್ಯಾರ್ಥಿಕ್ಷೇಮಾಧಿಕಾರಿ ಪ್ರೊ. ಲೋಕೇಶ್ ಪಿ.ಸಿ, ಕಾಲೇಜಿನ ಆಡಳಿತಾಧಿಕಾರಿ, ಶ್ರೀ ನಾಗೇಶ್‌ಕೊಚ್ಚಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.