ದೇವಚಳ್ಳ ಗ್ರಾಮದ ಜಬಳೆ – ಬಾಜಿನಡ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ದೇವಚಳ್ಳ ಗ್ರಾಮದ ಜಬಳೆ – ಬಾಜಿನಡ್ಕ ಕಾಂಕ್ರೀಟ್ ರಸ್ತೆ ಯನ್ನು ಮಾಜಿ ಪಂಚಾಯತ್ ಅಧ್ಯಕ್ಷರಾದ ನಾರಾಯಣ ಬಾಳೆತೋಟ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಶ್ರೀಪತಿ ಭಟ್ ಚಳ್ಳ ದೀಪ ಬೆಳಗಿಸಿದರು .


ಹುಕ್ರಪ್ಪ ಬಾಜಿನಡ್ಕ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಹೇಮನಾಥ ಕೊಡ್ತುಗುಳಿ, ದೇವಿಪ್ರಸಾದ್ ಸುಳ್ಳಿ, ಉದಯ ಟೈಲರ್, ಬೆಳ್ಳಿಯಪ್ಪ ಮಾಸ್ಟರ್ ಮೋನಪ್ಪ ಗೌಡ ಬಾಜಿನಡ್ಕ ಹಾಗೂ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.