ಸುಬ್ರಹ್ಮಣ್ಯ: ವಿದ್ಯಾಪ್ರಸನ್ನತೀರ್ಥ ಶ್ರೀ ಪಾದಂಗಳವರ 28ನೇ ಚಾತುರ್ಮಾಸ್ಯ ನಾಳೆಯಿಂದ ಆರಂಭ

0

ಸಂಪುಟ ಶ್ರೀ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾl ವಿದ್ಯಾಪ್ರಸನ್ನತೀರ್ಥ ಶ್ರೀ ಪಾದಂಗಳವರ 28ನೇ ಚಾತುರ್ಮಾಸ್ಯ ನಾಳೆಯಿಂದ (ಜು.27) ರಂದು ಆರಂಭವಾಗಲಿರುವುದಾಗಿ ವರದಿಯಾಗಿದೆ.

ಜು.27 ರಿಂದ ಆರಂಭವಾಗಿ ಸೆ. 18 ರ ತನಕ ವ್ರತ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭಗಳಲ್ಲಿ ಶ್ರೀ ಮಠದಲ್ಲಿ ಪ್ರವಚನ, ಸಂಕೀರ್ತನೆ, ಯಕ್ಷಗಾನ, ಹರಿಕಥೆ, ಸಂಗೀತ, ಭಜನೆ, ಸಂವಾದ, ತಾಳಮದ್ದಳೆ ಕಾರ್ಯಕ್ರಮಗಳು ನಡೆಯಲಿದೆ. ಆ. 19ರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿದೆ.