ಅಮರಮುಡ್ನೂರಿನ ಪುರುಷೋತ್ತಮ ಕೆರೆಗದ್ದೆಯವರಿಗೆ ರೈಲ್ವೆ ಇಲಾಖೆಯ ವತಿಯಿಂದ ಬಹುಮಾನ ಘೋಷಣೆ

0

ಮುಂಬಯಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿನ ಲೋಕೋ ಪೈಲಟ್ ಗಳ ಸಮಯ ಪ್ರಜ್ಞೆ ಯಿಂದ ಬಾರಕೂರು ಉಡುಪಿ ರೈಲ್ವೆ ನಿಲ್ದಾಣಗಳ ನಡುವೆ ಸಂಭವಿಸುತ್ತಿದ್ದ ಭಾರಿ ದೊಡ್ಡ ದುರಂತವು ತಪ್ಪಿದಂತಾಗಿದೆ.
ಈ ಬಗ್ಗೆ ಎಲ್ಲಾ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವರದಿಯು ಪ್ರಕಟಗೊಂಡಿದ್ದು ರೈಲ್ವೆಯಲ್ಲಿ ಕಳೆದ 25 ವರ್ಷಗಳಿಂದ ಮೈಲ್ ಎಕ್ಸ್‌ಪ್ರೆಸ್‌ ನ ಲೋಕೋ ಪೈಲೆಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮರ ಮುಡ್ನೂರು ಗ್ರಾಮದ ಪುರುಷೋತ್ತಮ ಕೆರೆಗದ್ದೆ ಯವರು ಭಾಗಿಯಾಗಿದ್ದು ಬಹುಮಾನಕ್ಕೆ ಭಾಜನರಾಗಿರುತ್ತಾರೆ. ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿಸಿದ ಜಾಗೃತ ಲೋಕೋ ಪೈಲಟ್ ತಂಡದ ಸದಸ್ಯರಿಗೆ ಕೊಂಕಣ ರೈಲ್ವೆಯ ಸಿ.ಎಂ.ಡಿ ಯವರು ತಲಾ 15,000/- ಬಹುಮಾನ ನೀಡುವ ಮೂಲಕ ಅಭಿನಂದಿಸಿರುವುದಾಗಿ ತಿಳಿದು ಬಂದಿದೆ. ಪ್ರಸ್ತುತ ಅವರು ಗೋವಾದ ಮಾಡಗಾಂವ್ ನಲ್ಲಿ ನೆಲೆಸಿರುತ್ತಾರೆ.