ಅರಂತೋಡು:ಆತಂಕ ಮೂಡಿಸಿರುವ ಅಪಾಯಕಾರಿ ಮರ

0

ತೆರವುಗೊಳಿಸದಿದ್ದಲಿ ಅನಾಹುತ ಖಚಿತ

ಅರಂತೊಡು ಗ್ರಾಮದ ತೊಡಿಕ್ಕಾನ ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಅಪಾಯಕಾರಿ ಮರವು ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಳೆದ ಕೆಲವು ದಿನಗಳಿಂದ ತಾಲೂಕಿನ ನಾನಾ ಕಡೆಗಳಲ್ಲಿ ಮಳೆ ಗಾಳಿ ಹಿನ್ನಲೆ ಮರಗಳು ಬಿದ್ದು ಮನೆ, ಕಟ್ಟಡಗಳು ಹಾನಿಗೊಂಡಿದೆ.

ಅಲ್ಲದೆ ಮರ ಇರುವ ಈ ಪ್ರದೇಶ ಜನ ನಿಬೀಡ ಪ್ರದೇಶ ವಾಗಿದ್ದು ಪ್ರತೀ ದಿನ ನೂರಾರು ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ನಡೆದಾಡುವ, ನೂರಾರು ವಾಹನಗಳು ಚಲಿಸುವ ರಸ್ತೆಯಾಗಿದೆ. ಆದ್ದರಿಂದ ಸಂಭಂದಪಟ್ಟ ಇಲಾಖೆ ಕೂಡಲೇ ಕ್ರಮ ಕೈ ಗೊಂಡು ಮರ ತೆರವುಗೊಸದೆ ಇದ್ದರೆ ಬಹುದೊಡ್ಡ ಅಪಾಯ ಉಂಟಾಗುವ ಸಂಭವವಿದೆ. ಪಕ್ಕದಲ್ಲಿ 4-5-ಮನೆಗಳು ಹಲವಾರು ವಿದ್ಯುತ್ ಕಂಬಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುವ ಸ್ಥಳವಾಗಿದ್ದು ಇಲ್ಲಿ ನಿಲ್ಲುವ ಸಾರ್ವಜನಿಕರು ಹೆಚ್ಚರಿಕೆಯಿಂದ ಇರಬೇಕಾಗಿದೆ.

ಕೂಡಲೆ ಮರವನ್ನು ತೆರವುಗೊಳಿಸಿ ಕೊಡುವಂತೆ
ಈ ಭಾಗದ ಸಾಮಾಜಿಕ ಕಾರ್ಯಕರ್ತ ಕಾದರ್ ಮೊಟ್ಟೆಂಗಾರ್ ಆಗ್ರಹಿಸಿದ್ದಾರೆ.