ನಮ್ಮನ್ನಗಲಿದ ನಾರಾಯಣ ಮಾಸ್ಟ್ರು ಕಾಟೂರವರಿಗೆ ಅಪಾರ ಶಿಷ್ಯರ ಭಾವಪೂರ್ಣ ನುಡಿನಮನ

0

✍️ ಗಣೇಶ ಜಾಲ್ಸೂರು

ಅಜ್ಞಾನವೆಂಬ ಕತ್ತಲೆಯಿಂದ ಕುರುಡಾಗಿದ್ದ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ನನ್ನ ಪ್ರಣಾಮಗಳು.

ಪ್ರತಿಯೊಬ್ಬರ ಬಾಲ್ಯದ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಮಹತ್ತರವಾದ ಪಾತ್ರ ವಹಿಸುತ್ತದೆ. ಅಪ್ಪ ಅಮ್ಮನ ಪ್ರೀತಿಯ ಆರೈಕೆ ಹಾರೈಕೆಯ ನಂತರ ನಾವು ಔಪಚಾರಿಕ ಶಿಕ್ಷಣಕ್ಕಾಗಿ ಶಾಲೆ ಕಡೆ ಮುಖ ಮಾಡುತ್ತೇವೆ. ಅಲ್ಲಿ ಯವರಗೆ ಮನೆಯೇ ಮೊದಲ ಪಾಠ ಆಲೆ ಜನನಿ ತಾನೇ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು. ಇವರೇ ನಾಳೆ ನಮ್ಮ ನಾಡನಾಳ್ವರು ಎಂಬ ಕವಿವಾಣಿಯಂತೆ ಒಪ್ಪಿಕೊಂಡವರು. ಹಾಗೆಯೇ ನಂತರದ ಓದು ಬರೆಹ ಸ್ಷಷ್ಟ ಮಾತು ಅಂತೆಯೇ ಗ್ರಹಣ ಶಕ್ತಿಯು ಪ್ರಾಥಮಿಕ ಹಂತದ ಆ ಕ್ಷಣ ನಿಜವಾದ ನಮ್ಮೆಲ್ಲರ ಪಾಲಿಗೆ ಅಮೃತ ಘಳಿಗೆಯದು.

ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ದೈಹಿಕವಾಗಿ ಮಾನಸಿಕವಾಗಿ ಮತ್ತೆ ಮತ್ತೆ ಸದೃಢರಾಗುತ್ತಲೇ ಬೆಳವಣಿಗೆ ಹೊಂದುವ ಜ್ಞಾನ ವಿಕಸಿತ ಹೊಂದುವ ಹಂತವದು. ಹಾಗಾಗಿ ನಮ್ಮ ಪ್ರತಿಯೊಬ್ಬರ ಪಾಲಿಗೆ ಪ್ರೈಮರಿ ಶಾಲೆ ಶಿಕ್ಷಕರು ಸದಾ ಸ್ಮರಣೀಯರು.

ಇದೀಗ ನಾನು ಮೂರುವರೆ ದಶಕಗಳ ಹಿಂದಿನ ನಾನು ನನ್ನ ಚಡ್ಡಿ ದೋಸ್ತಿಗಳ ಜೊತೆ ಪ್ರಾಥಮಿಕ ಶಿಕ್ಷಣ ಪಡೆದ ಕಥೆಯೂ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಕಾರಣ ನಮ್ಮೂರಿನ ಪೂಜ್ಯ ಗುರುಗಳು ಸೇವೆಯಿಂದ ನಿವೃತ್ತಿ ಹೊಂದಿ ವಿಶ್ರಾಂತ ಜೀವನದಲ್ಲಿದ್ದ ನಾರಾಯಣ ಮಾಸ್ಟ್ರು ಕಾಟೂರು ಇವರು ಅಲ್ಪಕಾಲದ ಅನಾರೋಗ್ಯದಿಂದ ನಮ್ಮೆಲ್ಲರನ್ನೂ ಅಗಲಿದರು. ಸುದ್ಧಿ ಕೇಳಿ ಸಹಜವಾಗಿಯೇ ಮನ ಮಮ್ಮಲ ನೊಂದಿತು.

ನಾವೆಲ್ಲರೂ ಬಾಲವಾಡಿ ಈಗಿನ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಮೊದಲ ಹೆಜ್ಜೆಯಿರಿಸಿ ಸೇರಿದ ಶಾಲೆಯಲ್ಲಿ ಒಂದನೆಯ ತರಗತಿಗೆ ಅಧಿಕೃತ ದಾಖಲಾತಿ ಪಡೆದು ಏಳನೆಯ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಪಡೆದು ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡೆವು‌. ಈ ಸುದೀರ್ಘ ಎಂಟು ವರ್ಷಗಳವರೆಗೆ ನನಗೆ ಮತ್ತು ನನ್ನ ಗೆಳೆಯರಿಗೆ ನೆಚ್ಚಿನ ಅಧ್ಯಾಪಕರಾಗಿದ್ದವರು ನಾರಾಯಣ ಮಾಸ್ಟ್ರು..

ಮೊದಲು ಅವರು ಕದಿಕಡ್ಕ ಶಾಲೆಯಲ್ಲಿದ್ದು ಮತ್ತೆ ಅಡ್ಕಾರು ಶಾಲೆಗೆ ಹೋದರು ಮತ್ತೆ ಪುನಃ ಕದಿಕಡ್ಕ ಶಾಲೆಗೆ ಬಂದು.ಸುದೀರ್ಘ ಅಧ್ಯಾಫನ ಸೇವೆ ಮಾಡಿ ಮತ್ತೆ ನಿವೃತ್ತಿ ಹೊಂದಿದರು. ಹಾಗಾಗಿ. ಜಾಲ್ಸೂರು ಗ್ರಾಮದ ಪ್ರತೀ ಊರಿನಲ್ಲಿ ಇವರ ಶಿಷ್ಯರು ಇದ್ದಾರೆ. ಆಗಿನ ಶಿಕ್ಷಣ ಕ್ರಮ ಮತ್ತು ಈಗಿನ ಆಧುನಿಕ ಶಿಕ್ಷಣ ಕ್ರಮದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ‌.ಆಗ ಗುರುವಿನ ಒಂದು ಪೆಟ್ಟಿನಿಂದ ಹತ್ತು ಒಳ್ಳೆಯ ಗುಣ ಬರುತ್ತಿತ್ತು.ಈಗ ಒಂದು ಪೆಟ್ಟು ಇಲ್ಲ ಸಲ್ಲದ ಹತ್ತು ಕೇಸುಗಳಿಗೆ ಕಾರಣವಾಗುವ ಕಾಲ ‌. ಹಾಗಾಗಿ ಹಿಂದೆ ಶಿಷ್ಯ ನಿಗೆ ಶಿಕ್ಷಯಾದರೆ ಇಂದು ಗುರುವಿಗೆನೇ ಶಿಕ್ಷೆಯಾಗುವ ಕಾಲವಾಗಿದೆ. ಹಾಗಾಗಿ ಮಕ್ಕಳಿಗೆ ಪೆಟ್ಟು ಕೊಟ್ಟು ಕಲಿಸುವ ಕಾಲವಲ್ಲವಿದು. ಇಂದಿನ ಮಕ್ಕಳು ಕಲಿಕೆಯಲ್ಲಿ ಕೂಡ ಜಾಣರಿದ್ದಾರೆ ಅಂಬೋಣ.

ಆದರೆ ನಾವೆಲ್ಲರೂ ಕಲಿಯುವಾಗ ತಿಂದ ಪೆಟ್ಟಿಗಿಂತ ನಮ್ಮ ಹಿರಿಯರು ಸೀನಿಯರ್ಸ್ ಅವರವರ ಶಾಲೆಯಲ್ಲಿ ತಿಂದ ಭರ್ಜರಿ ಪೆಟ್ಟಿನ ಬೆತ್ತದ ರುಚಿಯು ಬದುಕಿನಲ್ಲಿ ಒಳ್ಳೆಯ ಪಾಠ ಕಲಿಸಿತು ಎಂದು ಹೇಳೌ ತಮ್ಮ ತಮ್ಮ ಗುರುಗಳ ಬಗ್ಗೆ ಅಪಾರ ಗೌರವ ತೋರುತ್ತಾರೆ . ಅಲ್ಲಿ ಗುರುಗಳ ಮೇಲೆ ಭಯ ಭಕ್ತಿ ಇನ್ನೂ ಹೆಚ್ಚುತ್ತಿತ್ತು.ಇದು ಮಾತ್ರ ಸತ್ಯ ಕಾರಣವಿಷ್ಟೇ ಪೆಟ್ಟು ತಿಂದ ನಾವು ಬಿಡಿ ಆಗ ಮಕ್ಕಳ ಮನೆಯವರೇ ಗುರುಗಳಲ್ಲಿ ಈ ಬಗ್ಗೆ ಪ್ರಶ್ನಿಸಲು ಭಯಪಡುತ್ತಿದ್ದರು.ಅಂತಹ ಗುರುಭಕ್ತಿ ಇತ್ತು. ಈಗಲೂ ಗುರುಗಳ ಬಗ್ಗೆ ಅದೇ ಅಪಾರ ಗೌರವಾದರ ಭಯ ಭಕ್ತಿ ಇದೆ. ಆದರೆ ತಪ್ಪಿಗೆ ಶಿಕ್ಷೆ ಪೆಟ್ಟು ಈಗ ಇಲ್ಲ. ಈಗಾಗಲೇ ಹೇಳಿದಂತೆ ಬದಲಾವಣೆಯ ಕಾಲಘಟ್ಟ ಬುದ್ಧಿವಂತ ಮಕ್ಕಳ. ಕಾಲವಿದು.ಹಾಗಂತ ಹಿಂದಿನವರು ದಡ್ಡರಲ್ಲ ಬಿಸಿಯಾದರೇ ಮಾತ್ರ ಬೆಣ್ಣೆ ಕರಗುತ್ತಿತ್ತು ಅಂತಾ ಅಷ್ಟೇ.. ಸ್ವಲ್ಪ ದಪ್ಪ ಚರ್ಮ ಪೆಟ್ಟು ನಾಟುತ್ತಿರಲಿಲ್ಲ. ಆದರೆ ಆಗ ಬಡತನ ಅನಿವಾರ್ಯದ ದುಡಿಮೆ ಮನೆಯೇ ಗಟ್ಟಿ ಇಲ್ಲದ ಸಂದರ್ಭ ಊಟ ಬಟ್ಟೆ ಪುಸ್ತಕ ಚೀಲ ಶಾಲಾ ಫೀಸು ಅಂತಾ ಮಕ್ಕಳು ಮನೆಯವರೂ ಕಷ್ಟ ಪಡುತ್ಥಿದ್ದ ಕಾಲ ಸಂದರ್ಭ ಅದಾಗಿತ್ತು.

ನಾರಾಯಣ ಮಾಸ್ಟ್ರು ನಮಗೆಲ್ಲಾ ಪ್ರೈಮರಿ ಸ್ಕೂಲು ಮೇಸ್ಟ್ರು ಆಗಿದ್ದರು.ಕನ್ನಡ ಸಮಾಜ ನಮಗೆ ಪಾಠ ಮಾಡುತ್ತಿದ್ದರು. ಬೇರೆ ಕ್ಲಾಸಿಗೆ ಅನಿವಾರ್ಯ ಸಂದರ್ಭದಲ್ಲಿ ಗಣಿತ ವಿಜ್ಞಾನ. ಪಾಠವನ್ನೂ ಮಾಡುತ್ತಿದ್ದರು. ಇಂಗ್ಲಿಷ್ ಪಾಠಕ್ಕೆ. ಧನಲಕ್ಷ್ಮೀ ಟೀಚರ್ ಇದ್ರು.ನಾರಾಯಣ ಮಾಸ್ಟ್ರು ಬರೀ ಪಾಠ ಅಲ್ಲ ಹಾಡು.ನಾಟಕ ಯಕ್ಷಗಾನ ಭಜನೆ ದೇಶಭಕ್ತಿಗೀತೆ ಅಲ್ಲದೇ ಹೆಜ್ಜೆ ಹಾಕಿ ಡ್ಯಾನ್ಸ್ ಕೂಡ ಕಲಿಸುತ್ತಿದ್ದರು. ಆಗ ಮುಖ್ಯ ಶಿಕ್ಷಕರಾಗಿದ್ದವರು ದೇವರಗುಂಡ ತೀರ್ಥರಾಮ ಮಾಸ್ಟ್ರು .ಶಿಸ್ತಿನ ಸಿಪಾಯಿ ನಾಗರಬೆತ್ತ ಅವರ ಕೈಗೆ ಬಂತೋ ಅಂದರೆ ಕಾದಿದೆ ಪೆಟ್ಟು ಬೇರೇ ಗತಿಯಿಲ್ಲ ಓಡಲು ದಾರಿಯಿಲ್ಲ. ಆ ಕ್ಷಣಕ್ಕೆ ಶಾಲೆಯೇ ಮೌನ. ಬಿಳಿವೇಸ್ಟೀ ಬಿಳಿಶರ್ಟು ಶುಭ್ರ ಬಿಳಿ ಕರ್ಚಿಫ್ ಅದೇ ಅವರ ಡ್ರೆಸ್ ಕೋಡ್ ಗಂಭೀರ ವದನ ಗಣಿತ ಪಾಠ ಅವರದು. ಅವರ ಅಕ್ಷರ ಏನೋ ಒಂದು ಆಕರ್ಷಕವಾದುದು. ಕೈಗೆ ಹೊಟ್ಟೆಗೆ ಚಿವುಟಿದರೆ ಅಬ್ಬಾ ಲೆಕ್ಕ. ಪಕ್ಕ ಬರುತ್ತಿತ್ತು‌ ತೀರ್ಥರಾಮ ಮಾಸ್ಟ್ರು ರದು ಅಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸಿದವರು.

ನಾರಾಯಣ ಮಾಸ್ಟ್ರು ಬಗ್ಗೆ ಯಾವ ಶಿಷ್ಯರೂ ಅಬ್ಬಾ ಅವರ ಪೆಟ್ಟು ಅಂತಾ ಹೇಳಿದವರು ಇಲ್ಲ. ಅವರು ಹೊಡೆಯುವುದೇ ಇಲ್ಲ. ಒಂದು ವೇಳೇ ಹುಡುಗರು ತಪ್ಪು. ಮಾಡಿ ಸಿಕ್ಕಿ ಬಿದ್ದರೇ ಅವರ ಬೆನ್ನನ್ನು ಬಗ್ಗಿಸಿ ಹೊಡೆಯುತ್ತಿದ್ದರು. ಅದೂ ಕೂಡ ಅಪರೂಪ. ಆದರೆ ನಾರಾಯಣ. ಮಾಸ್ಟ್ರರ ಬುದ್ಧಿವಾದ ಮಾತು ಹೇಳಿ ನಮ್ಮ ನಮ್ಮ ಅಪ್ಪ ಅಮ್ಮನ ಬಗ್ಗೆ ಅಪಾರವಾದ ಗೌರವ ಮಾತು ಹೇಳಿ ನಮ್ಮನ್ನು ಭಾವನಾತ್ಮಕವಾಗಿ ಮನಸ್ಸು ಗೆದ್ದು ತಿದ್ದಿ ಪ್ರೀತಿಸುತ್ತಿದ್ದರು. ಮನ ಪರಿವರ್ತಿಸುತ್ತಿದ್ದರು. ಇಂದಿಗೂ ಕೂಡ ತನ್ನ ವಿದ್ಯಾರ್ಥಿಯನ್ನು ಕಂಡಾಗ ಎಲ್ಲಿದ್ದಿ ಹೇಗಿದ್ದಿ ಚೆನ್ನಾಗಿರು ಅಪ್ಪ ಅಮ್ಮನನ್ನು ಮನೆಯವರನ್ನು ಚೆನ್ನಾಗಿ ನೋಡಿಕೋ ಎನ್ನುವ ಪ್ರೀತಿ ಮಾತು ಹೇಳುತ್ತಿದ್ದವರು. ಮತ್ತು ನಮ್ಮ. ಜವಾಬ್ದಾರಿಗಳನ್ನು ನೆನಪಿಸುತ್ತಿದ್ದರು. ಅಂತಹ ಪ್ರೀತಿ ಅವರದು ಒಬ್ಬ.ಗುರು ಎಂದರೆ ತರಗತಿಗೆ ಮಾತ್ರ ಸೀಮಿತ ಅಲ್ಲ ಒಂದು ಕುಟುಂಬ ಒಂದು ಸಮುದಾಯ ಒಂದು .ಸಮಾಜವನ್ನು ತಿದ್ದುವ ಮಹತ್ವದ ಜವಾಬ್ದಾರಿ ಇದೆ ಎನ್ನುವ ಶ್ರೇಷ್ಠ ಗುರುಗಳ ಸಾಲಿಗೆ.ಸೇರಿದವರಾಗಿದ್ದರು.ಅಂತ ಶ್ರೇಷ್ಠ ಗುರುತರ ಜವಾಬ್ದಾರಿ ನಾರಾಯಣ. ಮಾಸ್ಟ್ರ ರವರಲ್ಲಿ ಇತ್ತು..

ಆದರೆ ಇಂದು ನಾನು ಬಹಳ ಅಭಿಮಾನದಿಂದ ಹೇಳುವುದು ನಾನು ನನ್ನ ಮನೆಯವರೂ ನನ್ನ ಊರಿನ ಗೆಳೆಯರು ಹಿರಿಯರು ಇವರೆಲ್ಲರಲ್ಲೂ ಒಂದು ಸಾಂಸ್ಕೃತಿಕ ಮನಸ್ಸು ಹಾಡುವ ಪ್ರವೃತ್ತಿ ನಾಟಕದ ಹುಚ್ಚು ಭಾಷಣ ಕಲೆ ನಿರೂಪಣೆಯ ಕೌಶಲ್ಯ ಬರವಣಿಗೆಯ ಚೆಂದ ಭಕ್ತಿ ತುಂಬಿದ ಭಜನೆ ಹಾಡುವುದು ಯುವಜನ ಮೇಳಗಳಲ್ಲಿ ಅದೆಷ್ಟೋ ಬಹುಮಾನಗಳು ನಮ್ಮೂರಿಗೆ ಬಂದರೆ ಎಳವೆಯಲ್ಲಿಯೇ ನಮಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಗಳ. ಅಭಿರುಚಿ ಮೂಡಿಸಿ ವೇದಿಕೆ ಯನ್ನು ಕಲ್ಪಿಸಿಕೊಡುತ್ತಿದ್ದರು. ಈ ಕಲೆಯ ಅಭಿರುಚಿ ನಮ್ಮೂರಿನ ಮನೆ ಮಂದಿಯಲ್ಲಿ ಼ಆಗೆಯೇ ಮುಂದುವರಿದೆ. ಪರೋಪಕಾರ ಗುಣ ಸ್ವಯಂಸೇವಾ ಗುಣ ಒಳ್ಳೆಯ ಸಂಘಟನೆ ಕಟ್ಟುವುದು ಊರಿನವರೆಲ್ಲರೂ ಒಂದಾಗಿ. ಸಾಮರಸ್ಯದಿಂದ ಬಾಳುವ ಒಳ್ಳೆಯ ಮೌಲ್ಯ ಗಳನ್ನು ಅಂದು ಎಳೆಯ ಮಕ್ಕಳಾದ ನಮಗೆ ಹೇ಼ಳಿ ಕೊಟ್ಟವರು ನಾರಾಯಣ ಮಾಸ್ಟ್ರುರವರು ಅವರ ಪ್ರೇರಣೆಯಿಂದ ಅವರ ಗುರು ಹಿತೋಪದೇಶದಿಂದ ಇವತ್ತು ನಮ್ಮೂರು ಸಾಂಸ್ಕೃತಿಕ ಕಲಾ ಶ್ರೀಮಂತಿಕೆಯನ್ನು ಹೊಂದಿದೆ.ಊರಿನ ಪ್ರತೀ ಮನೆಯ ಪ್ರತೀ ಮನಸ್ಸು ಗಳು ಗುರುಗಳ ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದಾರೆ. ನಿವೃತ್ತಿ ಯ ನಂತರ ಸಾಮಾಜಿಕ ಧಾರ್ಮೀಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರೂ ಆಗಿದ್ದರು
ಊರಿನ ಮಂದಿರ ಆದರ ಆಡಳಿತ ಸಲಹೆಗಾರರಾಗಿ ಗಣೇಶೋತ್ಸವ ಸಮಿತಿಯಲ್ಲಿ ಮಾರ್ಗದರ್ಶಕರಾಗಿ.ನೂತನ ಮಂದಿರದ ನಿರ್ಮಾಣದಲ್ಲಿ ಇವರ ಸಲಹೆ ಸಹಕಾರಗಳು ಅಪಾರವಾದುದು.

ಶಿಕ್ಷಕರಾಗಿ ಮತ್ತೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ‌ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿ ಮತ್ತೆ ವರ್ಷದ ಮಕ್ಕಳ ಹಬ್ಬ ‌ಹಾಗೆಯೇ ಶಾಲೆಗೆ ಮಕ್ಕಳ ಗಣನೀಯ. ಸಂಖ್ಯೆಯ ದಾಖಲಾತಿಯಲ್ಲಿ ನಾರಾಯಣ ಮಾಸ್ಟ್ರು ರವರ ಸೇವೆ ಸದಾ ಸ್ಮರಣೀಯವಾದುದು.ಇವರ ಬಗ್ಗೆ ಊರಿಗೆ ಶಿಕ್ಷಣ ಇಲಾಖೆಗೆ ಸಹದ್ಯೋಗಿ ಶಿಕ್ಷಕರಿಗೆ ಅಪಾರವಾದ ಗೌರವ ಮತ್ತೆ ಪ್ರೀತಿ ಇತ್ತು. ಅವರ ಮಗಳು ಯಶೋಲತಾ ಒಳ್ಳೆಯ ಹಾಡುಗಾರ್ತಿ ಆಗೆಲ್ಲಾ ಕೇಳಿದೆ
ಮಗ ಬಾಲಪ್ರದೀಪ ನಮಿತಾ ಮಗಳು . ತನ್ನ ಮಕ್ಕಳಿಗೂ ಪ್ರೈಮರಿಯಲ್ಲಿ ನಾರಾಯಣ ಮಾಸ್ಟೇ ಗುರುಗಳು ಇದು ಸರಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮದ ಮೇಲಿನ ನಿಜವಾದ ಪ್ರೀತಿ ಈ ಕಾರಣಕ್ಕಾಗಿಯೇ ಗುರುಗಳು ನಮಗೆ ಆದರ್ಶರಾಗಿದ್ದಾರೆ. ಗುರುಗಳ ಶ್ರೀಮತಿಯವರ ಬಗ್ಗೆ ನಾನು ಕಂಡದ್ದು ಭೇಟಿಯಾದದ್ದೇ ಕಡಿಮೆ.ಅವರ ಪ್ರೀತಿ ಆಶೀರ್ವಾದ ವನ್ನು ಸದಾ.ಬೇಡುವೆನು. ಅಪ್ಪನಂತೆಯೇ ಮಕ್ಕಳು ಕೂಡ. ಅದೆ ಸೌಜನ್ಯ ಅದೇ ಪ್ರೀತಿ ಅದೇ ನಗು ಅದೇ ಅತ್ಮೀಯತೆಯ ಒಡನಾಟದಿಂದ ಜವಾಬ್ದಾರಿಯುತ ಜೀವನ ನಡೆಸುತ್ಥಿದ್ದಾರೆ ಇವರ ಬದುಕು ಬಂಗಾರವಾಗಲಿ

ಇನ್ನೊಂದು ಖುಷಿಯ ನೆನಪು ನಾವೆಲ್ಲರೂ ಕದಿಕಡ್ಕ ಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಪಕ್ಕದ ಅಡ್ಕಾರು ಶಾಲೆಯಲ್ಲಿ ವಿಶೇಷ ಟೀಚೆರ್ಸ್ ಗಳ ಸಭೆ ಇದ್ದಾಗ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರೇ ಹೇಳಿ ಕೊಟ್ಟ ಹಾಡನ್ನು ಹಾಡಿ. ನಾಟಕವನ್ನು ಮಾಡಿ ಇಂಗ್ಲೀಷ್ ಸಂಭಾಷಣೆಯನ್ನು ಹೇಳಿ ಭಜನೆಯನ್ನು ಮಾಡಿ ಬರುತ್ಥಿದ್ದೆವು. ಮರುದಿನ ಕ್ಲಾಸಿನಲ್ಲಿ ಮಕ್ಕಳೇ ಚೆಂದ ಮಾಡಿದ್ದೀರಿ ನೀವೂ ಎಂದು ಮೆಚ್ಚುಗೆ ಮಾತುಗಳನ್ನಾಡಿ ಹರಸುತ್ತಿದ್ದರು. ನಾವೆಲ್ಲರೂ ಮುಖ.ಮುಖ ನೋಡಿ ಖುಷಿ ಪಡುತ್ಥಿದ್ದೆವು.ಇದೆಲ್ಲಾ ನೆನಪುಗಳು ಸ್ಮರಣೀಯವಾದುದು .ಗುರಿ ತೋರಿದ ಗುರುಗಳ ನಾವು ಮರೆಯುವುದುಂಟೇ.ಊರಿಗೆ ಅರಸನಾದರೂ ತಾಯಿಗೆ.ಮಗನೇ ಯಿವ ಶ್ರೇಷ್ಠ. ಅಧಿಕಾರದ ಹುದ್ದೆಯಲ್ಲಿದ್ದರೂ ಗುರುವಿಗೆ ಶಿಷ್ಯನೇ..ಇದು ಭಾರತೀಯ ಸಂಸ್ಕೃತಿ.

ಇಂದು ಅವರ ಅಗಲಿಕೆಯ ಸುದ್ದಿ ಯೂ ನಮ್ಮೆಲ್ಲರ ಕಣ್ಣು ತೋಯಿಸಿದೆ. ಅವರು ಕಲಿಸಿದ ಅಕ್ಷರಗಳೇ ಈ ಕ್ಷಣದಲ್ಲಿ ಅವರಿಗೆ ಕಂಬನಿಯ ಮಾಲೆಯಾಗಿ ನುಡಿ ನಮನ ಸಲ್ಲಿಸಿದೆ.ಒಬ್ಬ ಯೋಗ್ಯ ಗುರುವಿನ ಶಿಷ್ಯರು ನಾವೆಂಬ ಅಭಿಮಾನ ಸದಾ ಕಾಲ ನಮ್ಮದಾಗಿದೆ. ಅವರ ಆದರ್ಶಗಳು ಅವರು ಹೇಳಿ ಕೊಟ್ಟ ವಿದ್ಯೆ ಒಳ್ಳೆಯ ಮೌಲ್ಯಗಳು ನಮ್ಮಿಂದ ನಮ್ಮೂರಿನ ಆದರ್ಶಕ್ಕೆ ನೆರವಾಗಲಿ. ನಾವೆಲ್ಲರೂ ಒಂದಾಗಿ ಸಹಬಾಳ್ವೆಯಲಿ ಬದುಕೋಣ. ನಮ್ಮನಗಲಿದ ಗುರುಗಳ ಆತ್ಮಕ್ಕೆ ಸದ್ಗತಿ ದೊರೆಯಲೆಂದು ನಾವೆಲ್ಲರೂ ಕರ ಜೋಡಿಸಿ.ಶಿರಬಾಗಿಸಿ ಪ್ರಾರ್ಥಿಸೋಣ.

ಇಂತಿ ಪ್ರೀತಿಯ ಶಿಷ್ಯ,

ಗಣೇಶ್ ಜಾಲ್ಸೂರು
ಶಿಕ್ಷಕರು, ಕಾರ್ಕಳ