ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲೂಕು ಸಹಾಭಾಗಿತ್ವದಲ್ಲಿ ವಿಶ್ವ ಮಾದಕವಸ್ತು ವಿರೋಧಿ ದಿನ ಹಾಗೂ ಡೆಂಗ್ಯೂ ಜ್ವರದ ಮುಂಜಾಗ್ರಾತಿ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಅಡ್ಕಾರು ಸಮುದಾಯ ಭವನದಲ್ಲಿ ಜು. 28ರಂದು ನಡೆಯಿತು.
ಜಾಲ್ಸೂರು ಒಕ್ಕೂಟದ ಅಧ್ಯಕ್ಷ ಗಣೇಶ್ ಅಂಬಾಡಿಮೂಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಜಾಲ್ಸೂರು ವಲಯದ ಜನಜಾಗೃತಿ ವೇದಿಕೆ ವಲಯಧ್ಯಕ್ಷ ಭಾಸ್ಕರ ಅಡ್ಕಾರು ಅವರು ಮಾದಕ ವಸ್ತು ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರು.
ಅರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಜಲಜಾಕ್ಷಿ ಅಡ್ಕಾರು ಡೆಂಗ್ಯೂ ಜ್ವರದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಅವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಾಲ್ಸುರು ಸಿ.ಎಸ್.ಸಿ. ಸೇವಾದಾರರಾದ ಶ್ರೀಮತಿ ಪ್ರಿಯಾರವರು ಸಿ.ಎಸ್.ಸಿ. ಕಾರ್ಯಕ್ರಮಗಳ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಂಜನಾದ್ರಿ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಜಾಲ್ಸೂರು, ಜಾಲ್ಸೂರು ವಲಯದ ಮೇಲ್ವಿಚಾರಕ ತೀರ್ಥರಾಮ,ಸೇವಾಪ್ರತಿನಿಧಿ ಚಂದ್ರಕಲಾ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನವ ಜೀವನ ಸದಸ್ಯ ಶಿವಾನಂದ ಅವರು ಸ್ವಾಗತಿಸಿ, ಒಕ್ಕೂಟದ ಜತೆ ಕಾರ್ಯದರ್ಶಿ ದೀಪಕ್ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.