ರೋಟರಿ ಕ್ಲಬ್ ಸುಳ್ಯದ ವತಿಯಿಂದ ‘ತಾಯಿ – ಮಗುವಿನ ಆರೋಗ್ಯ ರಕ್ಷಣೆ’ ಮಾಹಿತಿ ಕಾರ್ಯಕ್ರಮವು ಕೋನಡ್ಕ ಪದವು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಉಪಾಧ್ಯಕ್ಷರಾದ ರೊ .ಡಾ | ರಾಮ್ ಮೋಹನ್ ರವರು ವಹಿಸಿದ್ದರು. ರೊ. ಮಧುರಾ ಜಗದೀಶ್ ರವರು ಸರ್ವರನ್ನು ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನೆ ಸುಳ್ಯದ ಮೇಲ್ವಿಚಾರಕರಾದ ಶ್ರೀಮತಿ ಉಷಾ ಪ್ರಸಾದ್ ರೈಯವರು ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗಾಗಿ ಅನುಸರಿಸಬೇಕಾದ ಕ್ರಮಗಳು ಮತ್ತು ಕಿಶೋರಿಯರು ಗರ್ಭಿಣಿಯರು, ಬಾಣಂತಿಯರು ಅಳವಡಿಸಿಕೊಳ್ಳಲೇಬೇಕಾದ ಜೀವನ ಶೈಲಿ ಹಾಗೂ ಕುಟುಂಬದವರು ನೀಡಬೇಕಾದ ಸಹಕಾರದ ಕುರಿತು ಮಾಹಿತಿ ನೀಡಿದರು. ರೊ. ಚಿಂತನ ಸುಬ್ರಹ್ಮಣ್ಯ ಹಾಗೂ ರೊ. ಮಧುರಾ ಜಗದೀಶ್ ರವರು ಗರ್ಭಿಣಿಯರಿಗೆ ಸಾಂಕೇತಿಕವಾಗಿ ಸೀಮಂತ ಕಾರ್ಯ ನಡೆಸಿಕೊಟ್ಟರು. ಬಳಿಕ ಅವರಿಗೆ ಅವಶ್ಯಕತೆ ಇರುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಸಮುದಾಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿಯರು , ಪೋಷಕರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೇದಿತಾ ರವರು ಪ್ರಾರ್ಥನೆ, ಧನ್ಯವಾದ ನೆರವೇರಿಸುವುದರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.