ನಾವೂರು :ಭಾರೀ ಮಳೆಗೆ ಅಕ್ಕ ಪಕ್ಕದ ಎರಡು ಮನೆಗಳ ತಡೆಗೋಡೆ ಕುಸಿತ, ತಪ್ಪಿದ ಅನಾಹುತ

0

ಸುಳ್ಯ ನಾವೂರು ಸಮೀಪ ಬಾರಿ ಮಳೆಗೆ ಅಕ್ಕ ಪಕ್ಕದ ಎರಡು ಮನೆಗಳ ತಡೆ ಗೋಡೆ ಮತ್ತು ಕಾಪೌಂಡ್ ಜು 29 ರಂದು ಸಂಜೆ ವೇಳೆ ಕುಸಿದು ಬಿದ್ದು ಬಾರಿ ನಷ್ಟ ಸಂಭವಿಸಿದೆ.

ನಾವೂರು ನಿವಾಸಿ ರಶೀದ್ ಎಂಬುವವರ ಮನೆಯ ತಡೆ ಗೋಡೆ ಮತ್ತು ಕಪೌಂಡ್ ಪಕ್ಕದಲ್ಲಿರುವ ಮನೆಯ ಹಿಂಭಾಗದ ಬಳಿ ಬಿದ್ದಿದ್ದು ಆ ಸಮಯದಲ್ಲಿ ಘಟನೆ ನಡೆದ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಜೀವ ಹಾನಿಯಿಂದ ತಪ್ಪಿದ್ದಾರೆ.
ಅದೇ ರೀತಿ ಅಲ್ಲೇ ಪಕ್ಕದಲ್ಲಿರುವ ಮಶೂದ್ ಎಂಬುವವರ ಕಂಪೌಂಡ್ ಬಿದ್ದು ನಷ್ಟ ಸಂಭವಿಸಿದೆ.