ಪಂಜ:ಅಳ್ಪೆ-ಚಿಂಗಾಣಿಗುಡ್ಡೆ ದೈವಸ್ಥಾನದ ಗೌರವಾಧ್ಯಕ್ಷ,ಪ್ರಧಾನ ಪರಿಚಾರಕ ಜತ್ತಪ್ಪ ಗೌಡ ಕೋಡಿ ನಿಧನ

0

ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು-ಉಳ್ಳಾಲ್ತಿ,ಮಹಿಷಂತಾಯ ದೈವಸ್ಥಾನದ ಗೌರವಾಧ್ಯಕ್ಷ, ದೈವಸ್ಥಾನದಲ್ಲಿ ಪ್ರಧಾನ ಪರಿಚಾರಕರಾಗಿ , ಊರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಹಿರಿಯ ಮಾರ್ಗದರ್ಶಕರಾಗಿ (ಊರು ಗೌಡ )ಮಾಡುತ್ತಾ ಸುಧೀರ್ಘ ಸೇವೆ ಸಲ್ಲಿಸಿದ ಐವತ್ತೊಕ್ಲು ಗ್ರಾಮದ ಕೋಡಿ ಜತ್ತಪ್ಪ ಗೌಡ ರವರು ಜು.30 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 86 ವರುಷ ವಯಸ್ಸಾಗಿತ್ತು.

ಪತ್ನಿ ಶ್ರೀಮತಿ ಶೇಷಮ್ಮ, ಪುತ್ರರಾದ ಚಂದ್ರಶೇಖರ, ಶಿವರಾಮ, ಧರ್ಮಪಾಲ, ಸದಾನಂದ, ಪುತ್ರಿಯರಾದ ಶ್ರೀಮತಿ ದುರ್ಗಾಶ್ರೀ, ಶ್ರೀಮತಿ ಭವಾನಿ ,ಶ್ರೀಮತಿ ರೂಪ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಜು.31ರಂದು ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.