ಜಯನಗರ :ಶಾಲಾ ಆವರಣದಲ್ಲಿ ಅಪಾಯಕಾರಿ ಬೃಹತ್ ಮರ

0

ತೆರವುಗೊಳಿಸದಿದ್ದಲ್ಲಿ ಅಪಾಯ ಖಚಿತ

ಜಯನಗರ ಸರಕಾರಿ ಶಾಲಾ ಅವರಣದ ಕಂಪೌಂಡ್ ಬಳಿ ಕಾಡು ಮಾವಿನ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿ ಬೆಳೆದು ನಿಂತಿದೆ.

ಸುಮಾರು 50 ಕ್ಕೂ ಹೆಚ್ಚು ವರ್ಷದ ಈ ಮಾವಿನ ಮರ ಇದೀಗ ಅದರ ಕೊಂಬೆಗಳು ವಿಸ್ತೀರ್ಣ ವಾಗಿ ಬೆಳೆದು ಅಪಾಯದ ಸ್ಥಿತಿಯಲ್ಲಿ ಬಂದು ನಿಂತಿದೆ.

ಬೇಸಿಗೆಯಲ್ಲಿ ಶಾಲೆಯ ಆಟದ ಮೈದಾನಕ್ಕೆ ಮತ್ತು ಸ್ಥಳೀಯ ಪರಿಸರಕ್ಕೆ ನೆರಳು ನೀಡುತಿದ್ದರೂ ಮಳೆ ಮತ್ತು ಗಾಳಿಯ ಸಂಧರ್ಭ ಅದರಡಿಯಲ್ಲಿ ನಿಲ್ಲಲು ಜನ ಭಯ ಪಡುವ ರೀತಿಯಲ್ಲಿ ಇದೆ.
ಪಕ್ಕದಲ್ಲಿ ಜಯನಗರ ದಿಂದ ಕುತ್ಪಾಜೆಗೆ ಸಂಚಾರ ಕಲ್ಪಿಸಿಕೊಡುವ ಮುಖ್ಯ ರಸ್ತೆ ಇದ್ದು ಬೆಳಿಗ್ಗೆ ಮತ್ತು ಸಂಜೆ ವೇಳೆ ಈ ಪ್ರದೇಶದಲ್ಲಿ ಹತ್ತಾರು ಆಟೋ ಚಾಲಕರು ತಮ್ಮ ವಾಹನವನ್ನು ನಿಲ್ಲಿಸಿ ಪ್ರಯಾಣಿಕರಿಗಾಗಿ ಕಾಯುತ್ತಿರುತ್ತಾರೆ. ಅಲ್ಲದೆ ಸ್ಥಳೀಯ ನಿವಾಸಿಗಳು ಈ ಮರದಡಿಯಲ್ಲಿ ಸದಾ ನಿಂತಿರುವುದು ಮತ್ತು ಶಾಲಾ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುವುದು ಸಹಜವಾಗಿ ಕಂಡು ಬರುತ್ತಿದೆ.

ಆದ್ದರಿಂದ ಸಂಭಂದಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಮುಂದೆ ಏನಾದರೂ ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ.

ಕನಿಷ್ಠಪಕ್ಷ ಮರದ ಕೊಂಬೆಗಳನ್ನಾದರೂ ತೆರವು ಗೊಳಿಸಿ ಅಪಾಯವನ್ನು ದೂರ ಮಾಡಿ ಕೊಡಬೇಕಾಗಿದೆ.