ಸುಳ್ಯದ ಸಂತ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ “ಏಕ್ ಭಾರತ್ ಶ್ರೇಷ್ಠ ಭಾರತ್ ” ಅಭಿಯಾನವನ್ನು ಉದ್ಘಾಟಿಸಲಾಯಿತು.
ಸಮಾರಂಭದ ಸಭಾಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿಸೋಜ ವಹಿಸಿ ಮಾತನಾಡಿ, ” ವಿವಿಧತೆಯಲ್ಲಿ ಏಕತೆಯನ್ನು ಬೆಳೆಸಲು ಸಹಾಯ ಮಾಡುವ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಿಯೋಜಿತ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೀಟಲತಾ ಡಿ’ಸಿಲ್ವ, ಏಕ್ ಭಾರತ್ ಶ್ರೇಷ್ಠ ಭಾರತ್ ಅಭಿಯಾನದ ನೋಡಲ್ ಶಿಕ್ಷಕಿ ಶೋಭಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕ್ಷಯ್ 8ಎ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಸುಶಾಂತ್ 9ಎ, ಆದಿತ್ಯ ಪ್ರಭು 8ಎ ಕರ್ನಾಟಕ ಮತ್ತು ಉತ್ತರಖಂಡ ರಾಜ್ಯದ ಸಂಸ್ಕೃತಿಯ ಬಗ್ಗೆ ಮಾಹಿತಿಯನ್ನು ನೀಡಿದರು.ವಿದ್ಯಾರ್ಥಿಗಳು ಕರ್ನಾಟಕ ಮತ್ತು ಉತ್ತರಖಂಡ ರಾಜ್ಯದ ಸಾಂಪ್ರದಾಯಿಕ ಉಡುಗೆಗಳನ್ನು ತೊಡುವ ಮೂಲಕ ಎರಡು ರಾಜ್ಯದ ಸಂಸ್ಕೃತಿಯ ಸಿರಿತನವನ್ನು ಎತ್ತಿ ಹಿಡಿದರು . ವಿದ್ಯಾರ್ಥಿನಿ ಮರಿಯಂ ಹುದಾ 10 ಎ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ರೀಟಲತಾ ಡಿ’ಸಿಲ್ವ,ಸ್ಮಿತಾ ಡಿ’ಸೋಜಾ ಹಾಗೂ ಶಿಕ್ಷಕ,ಶಿಕ್ಷಕೇತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.