ಬೆಳ್ಳಾರೆಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನದ ಪ್ರಯುಕ್ತ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

0

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಉಪವಿಭಾಗ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಬೆಳ್ಳಾರೆಯ ಗ್ರಾಮ ಪಂಚಾಯತ್ ಕಟ್ಟಡದ ರಾಜೀವ ಗಾಂಧೀ ಸೇವಾ ಕೇಂದ್ರದಲ್ಲಿ ನಡೆಯಿತು.

ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅದೀಕ್ಷಕ ಹರೀಶ್ ಜಿ ಅಭಿಯಾನವನ್ನು ಉದ್ಘಾಟಿಸಿ ಶುಭಹಾರೈಸಿದರು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಕೆ. ಎಲ್ ರೈ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಉಪ ಅಂಚೆ ವಿಭಾಗದ ಅಂಚೆ ನಿರೀಕ್ಷಕ ವಿನೋದ್ ಕುಮಾರ್ ಎಂ, ಎಸ್ ಅಂಚೆ ಜನ ಸಂಪರ್ಕ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ವಿಭಾಗದ ಸಹಾಯಕ ಅಂಚೆ ನಿರೀಕ್ಷಕ ಚಂದ್ರ ನಾಯ್ಕ್, ಬೆಳ್ಳಾರೆ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಯಶೋಧ ಜಿ ಉಪಸ್ಥಿತರಿದ್ದರು. ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ ಸ್ವಾಗತಿಸಿದರು. ಬೆಳ್ಳಾರೆ ಅಂಚೆ ಕಛೇರಿಯ ಅಂಚೆ ಸಹಾಯಕ ಅನಂತಕೃಷ್ಣ ಪ್ರಭು ವಂದಿಸಿದರು. ಜ್ಞಾನದೀಪ ಸಂಸ್ಥೆಯ ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು.

ಸುಮಾರು 200ಕ್ಕೂ ಅಧಿಕ ಮಂದಿ ಹೊಸ ಆಧಾರ್ ನೋಂದಣಿ, ಆಧಾರ್ ತಿದ್ದುಪಡಿ ಮತ್ತು ಅಪ್ ಡೇಟ್ ಸೇವೆಗಳ ಪ್ರಯೋಜನ ಪಡೆದರು. ಶಿಬಿರದಲ್ಲಿ ಸಾರ್ವಜನಿಕರಿಗೆ ಸಮಗ್ರ ರಕ್ಷಾ ಯೋಜನೆಯ ಅಪಘಾತ ವಿಮೆ ಮಾಡಿಕೊಡಲಾಯಿತು. ಜ್ಞಾನದೀಪ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಮತ್ತು ಅಂಚೆ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು.

ವರದಿ : ಉಮೇಶ್ ಮಣಿಕ್ಕಾರ