ಕಲ್ಮಡ್ಕ – ಕುಕ್ಕುಜಡ್ಕ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ

0

ಕಲ್ಮಡ್ಕದಿಂದ ಕುಕ್ಕುಜಡ್ಕ ಕಡೆಗೆ ಸಂಚರಿಸುವ ರಸ್ತೆಯ ಮಧ್ಯೆ ಮತ್ತಿಗುಡ್ಡೆ ಎಂಬಲ್ಲಿ ರಾತ್ರಿ ಸಮಯದಲ್ಲಿ ಬರೆ ಜರಿದು ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ.