ವಾರಿಸುದಾರನಿಗೆ ಹಿಂತಿರುಗಿಸಿದ ನ.ಪಂ.ಪೌರಕಾರ್ಮಿಕರು
ನಗರ ಪಂಚಾಯತ್ ನಲ್ಲಿ ಕಸ ವಿಲೇವಾರಿ ಮಾಡುವ ವೇಳೆ ದಾಖಲೆಗಳಿಂದ ಪರ್ಸ್ ಸಿಕ್ಕಿದ್ದು, ಅದರಲ್ಲಿದ್ದ ಆಧಾರದಲ್ಲಿ ನ.ಪಂ.ಪೌರಕಾರ್ಮಿಕರು ವಾರಿಸುದಾರರಿಗೆ ಹಿಂತಿರುಗಿಸಿದ ಘಟನೆ ಇಂದು ವರದಿಯಾಗಿದೆ.
ನಗರ ಪಂಚಾಯತ್ ಆವರಣದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ಆಧಾರ್, ಎಟಿಎಂ ಕಾರ್ಡ್, ಪಾನ್ ಕಾರ್ಡ್ ಮೊದಲಾದ ದಾಖಲೆ ಹೊಂದಿದ್ದ ಪರ್ಸ್ ಸಿಕ್ಕಿತು.ಅದರಲ್ಲಿದ್ದ ಪೋನ್ ನಂಬರ್ ಗೆ ಪೋನ್ ಮಾಡಿದಾಗ
ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿ ಶ್ರೀನಿಧಿ ಎಂಬವರದೆಂದು ಗೊತ್ತಾಯಿತು. ಅವರು ನಗರ ಪಂಚಾಯತ್ ಬಳಿ ಬಂದು ಪೌರ ಕಾರ್ಮಿಕ ವಸಂತರವರಿಂದ ಪರ್ಸ್ ಪಡೆದುಕೊಂಡರು.
ಒಂದು ತಿಂಗಳ ಹಿಂದೆ ಪುತ್ತೂರಿನಿಂದ ಸುಳ್ಯಕ್ಕೆ ಬಸ್ ನಲ್ಲಿ ಬರುತ್ತಿದ್ದ ವೇಳೆ ಇವರ ಪರ್ಸ್ ಕಳೆದುಹೋಗಿತ್ತು.ಅದರಲ್ಲಿ ಒಂದೂವರೆ ಸಾವಿರ ಹಣ ಕೂಡ ಇತ್ತು. ಪರ್ಸ ಲ್ಲಿದ್ದ ಹಣವನ್ನು ತೆಗೆದು ಪರ್ಸ್ ನ್ನು ಕಸದ ತೊಟ್ಟಿಗೆ ಹಾಕಿರುವುದರಿಂದ ನಗರ ಪಂಚಾಯತ್ ಕಸದಲ್ಲಿ ಸಿಕ್ಕಿರಬಹುದೆಂದು ಅಂದಾಜಿಸಲಾಗಿದೆ. ಅಗತ್ಯ ದಾಖಲೆಗಳಲ್ಲಿದ್ದ ಪರ್ಸ್ ಹಿಂತಿರುಗಿಸಿದ ಪೌರ ಕಾರ್ಮಿಕರಿಗೆ ವಿದ್ಯಾರ್ಥಿ ಕೃತಜ್ಞತೆ ಹೇಳಿದರು.